ನಾನು ಯಾರ ಚಾಡಿ ಮಾತನ್ನು ಕೇಳುವುದಿಲ್ಲ, ಯಾವ ನಾಯಕನಿಲ್ಲದಿದ್ದರೂ ಕಾಂಗ್ರೆಸ್ ಪಕ್ಷ ಇರುತ್ತದೆ: ಡಿಕೆ ಶಿವಕುಮಾರ್
ಉಡುಪಿ: (ಉಡುಪಿ ಟೈಮ್ಸ್ ವರದಿ)ಗ್ರಾಮ ಪಂಚಾಯತ್ ಮಟ್ಟದಲ್ಲಿ ಕಾಂಗ್ರೆಸ್ ‘ಪ್ರಜಾ ಪ್ರತಿನಿಧಿ’ಗಳ ತಂಡವನ್ನು ಶೀಘ್ರ ರಚಿಸಲಾಗುವುದೆಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ಉಡುಪಿ ಜಿಲ್ಲಾ ಕಾಂಗ್ರೆಸ್ ಹಮ್ಮಿಕೊಂಡ ಕಾರ್ಯಕರ್ತರ ಸಭೆಯಲ್ಲಿ ಘೋಷಿಸಿದರು.
ಉಡುಪಿ ಜಿಲ್ಲೆಗೆ ಕೆಪಿಸಿಸಿ ಅಧ್ಯಕ್ಷರಾಗಿ ಪ್ರಥಮ ಬಾರಿಗೆ ಉಡುಪಿಗೆ ಆಗಮಿಸಿದ ಡಿಕೆ ಶಿವಕುಮಾರ್ ಬಾಸೆಲ್ ಮಿಷನ್ ಸಭಾಂಗಣದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಮುಂದಿನ ಗ್ರಾಮ ಪಂಚಾಯತ್ ಚುನಾವಣೆಗೆ ಪಕ್ಷವು ಗ್ರಾಮ ಮಟ್ಟದಲ್ಲಿ ನೂತನ 24 ಜನರ ಸಮಿತಿ ರಚಿಸಲಾಗುವುದು. ಅದರಲ್ಲಿ ಎನ್‌ಎಸ್‌ಐಯು, ಯೂತ್ ಕಾಂಗ್ರೆಸ್, ಸೇವಾದಳ, ಮಹಿಳಾ ಕಾಂಗ್ರೆಸ್, ಹಿಂದುಳಿದ ವರ್ಗಗಳ ಕಾರ್ಯಕರ್ತರನ್ನು ಸೇರಿಸಿ ಸಮಿತಿ ರಚಿಸಿಲಾಗುವುದು ಎಂದರು.
ಈ ಮೊದಲು ಪಕ್ಷದಲ್ಲಿ ಶಾಸಕ, ಮುಖಂಡರ ಮನೆಯಲ್ಲಿ ಕುಳಿತು ಸಮಿತಿಗಳನ್ನು ರಚಿಸಲಾಗುತ್ತಿತ್ತು. ಇನ್ನು ಮುಂದೆ ಅಂತಹ ಯಾವುದೇ ಪದಾಧಿಕಾರಿಗಳನ್ನು ನೇಮಿಸಲಾಗುವುದಿಲ್ಲವೆಂದು ಖಡಕ್ ಆಗಿ ಸಭೆಯಲ್ಲಿ ಡಿಕೆ ಶಿವಕುಮಾರ್ ಹೇಳಿದರು.
ತನ್ನಿಂದಲೇ ಕಾಂಗ್ರೆಸ್ ಪಕ್ಷ ಎಂದು ಬೀಗುತ್ತಿದ್ದವರಿಗೆ ಮಾತಿನಲ್ಲೇ ತಿವಿದ ಡಿಕೆಶಿ: ಕಾಂಗ್ರೆಸ್‌ನಲ್ಲಿ ಕೆಲವರು ತನ್ನಿಂದಲೇ ಪಕ್ಷ ಇದೆಂದು ಎನಿಸಿಕೊಂಡು ವರ್ತಿಸುತ್ತಾರೆ. ನಾನು ಈ ಬಗ್ಗೆ ಯಾವುದೇ ಚಾಡಿ ಮಾತಿಗೆ, ಕಿವಿವುದುವವರ ಮಾತಿಗೆ ನಾನು ಬೆಲೆ ಕೊಡುವುದಿಲ್ಲ ಎಂದು ಹೇಳಿದರು.
ಕೇಂದ್ರ ಸರಕಾರ ಪ್ರತಿಯೊಬ್ಬರ ಖಾತೆಗೆ ರೂ. 15 ಲಕ್ಷ , ಉದ್ಯೋಗ ಭರವಸೆ ಬೀಡಿತ್ತು, ಕೊರೋನಾ ಸಂದರ್ಭ ಹೊರ ರಾಜ್ಯಗಳಿಗೆ ದುಡಿಯಲು ಹೋದವರಿಗೆ ತಮ್ಮ ಸ್ವಂತ ಊರುಗಳಿಗೆ ಹೋಗಲು ಬೀಡದ ಸರಕಾರದ ನಿರ್ಧಾರಗಳ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಮುಂದಿನ ದಿನಗಳಲ್ಲಿ ಮನೆಮನೆಗಳಿಗೆ ತಿಳಿ ಹೇಳಬೇಕೆಂದರು.