ಪಣಿಯಾಡಿ: ಶ್ರೀಅನ೦ತಪದ್ಮನಾಭ ದೇವಸ್ಥಾನ ನವೀಕರಣಕ್ಕೆ ಶಿಲಾಮುಹೂರ್ತ
ಉಡುಪಿ: (ಉಡುಪಿ ಟೈಮ್ಸ್ ವರದಿ)ನಶಿಸುತ್ತಿರುವ ಪ್ರಾಚೀನವಾದ ದೇವಸ್ಥಾನಗಳನ್ನು ಜೀರ್ಣೋದ್ಧಾರಗೊಳಿಸುವುದು ಶ್ರೇಷ್ಠವಾದ ಪುಣ್ಯಕಾರ್ಯ. ಮಂತ್ರಸಿದ್ಧರು ತಪಸ್ವಿಗಳು ಪ್ರತಿಷ್ಠಾಪಿಸಿದ ಅಥವಾ ಪೂಜಿಸಿದ ದೇವಸ್ಥಾನಗಳ ಸನ್ನಿಧಾನಗಳನ್ನು ವರ್ಣಿಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ನಮ್ಮ ಪಣಿಯಾಡಿಯ ಶ್ರೀ ಅನಂತಪದ್ಮನಾಭ ದೇವಸ್ಥಾನದ ಮಹತ್ವವೂ ಅಗಾಧವಾಗಿದೆ. ಎಲ್ಲರ ಕುಲಸ್ವಾಮಿಯಾದ ಉಡುಪಿಯ ಶ್ರೀಅನಂತಾಸದೇವರೇ ಎಂಟುನೂರು ವರ್ಷಗಳ ಹಿಂದೆ ಮಾಧವಕುಂಜಿತ್ತಾಯರಿಗೆ ಅನುಗ್ರಹದಿಂದ ನೀಡಿದ ಪ್ರತಿಮೆ ಇದು. ಇಂಥಹ ಭವ್ಯವಾದ ಇತಿಹಾಸವಿರುವ ಈ ದೇವಸ್ಥಾನದ ಜೀರ್ಣೋದ್ಧಾರದ ಕಾರ್ಯ ನಮಗೆಲ್ಲರಿಗೂ ಒದಗಿರುವ ಸುಯೋಗ.
ಉತ್ಥಾನ ದ್ವಾದಶಿಯ ಪರ್ವಕಾಲದಲ್ಲಿ ನಡೆಯುತ್ತಿರುವ ಶಿಲಾಮುಹೂರ್ತ ಕಾರ್ಯಕ್ರಮದಿಂದ ಎಲ್ಲರ ಜೀವನದಲ್ಲಿಯೂ ಅಭ್ಯುದಯವಾಗಲಿ ಎಂದು ಪುತ್ತಿಗೆ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಸುಗುಣೇಂದ್ರ ತೀರ್ಥಶ್ರೀಪಾದರು ಸಂದೇಶವನ್ನು ನೀಡಿದರು.
ಉಡುಪಿಯ ಪಣಿಯಾಡಿಯ ಶ್ರೀ ಅನಂತಪದ್ಮನಾಭ ದೇವಸ್ಥಾನದ ಜೀರ್ಣೋದ್ಧಾರ ಪ್ರಯುಕ್ತ ಶಿಲಾಮುಹೂರ್ತ ಕಾರ್ಯಕ್ರಮವು ನಡೆಯಿತು. ದೇವಸ್ಥಾನದ ವೇ.ಮೂ.ಹಯವದನ ತಂತ್ರಿಗಳು, ವಿದ್ವಾಂಸರಾದ ಗೋಪಾಲಕೃಷ್ಣ ಜೋಯಿಸ್, ಬಿ.ಗೋಪಾಲಾಚಾರ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಮುಖ್ಯಸ್ಥರಾದ ರಾಘವೇಂದ್ರ ಕಿಣಿ, ಕುಂಜಿಬೆಟ್ಟು ವಾರ್ಡಿನ ಸದಸ್ಯರಾದ ಗಿರೀಶ್ ಅಂಚನ್ ಮತ್ತು ಮೈಸೂರು ರಾಮಚಂದ್ರಾಚಾರ್ಯರು ಹಾಗೂ ಸ೦ತೋಷ್ ಪಿ ಶೆಟ್ಟಿ ತೆ೦ಕರ ಗುತ್ತು ಶಿಲಾಮಯ ಕೆಲಸದ ಉಸ್ತುವಾರಿಯನ್ನು ವಹಿಸಿಕೊ೦ಡಿದ್ದು ಕಾರ್ಕಳದ ಶಿಲ್ಪಿಯಾದ ರಾಜು ಎಚ್ ನಾಯಕ್ ರವರು ಕಲ್ಲಿನ ಕೆತ್ತನೆಯ ಕೆಲಸವನ್ನು ನಡೆಸಿಕೊಡಲಿದ್ದಾರೆ. ಮಹಿತೋಷ ಆಚಾರ್ಯ ಕಾರ್ಯಕ್ರಮವನ್ನು ನಿರ್ವಹಿಸಿದರು.