ಉಡುಪಿ: ನಕ್ಷತ್ರಗಳ ಚಲನೆಯನ್ನು ಗುರುತಿಸಬಹುದಾದ ಪ್ಲಾನಿಸ್ಪಿಯರ್ ಅನಾವರಣ

ಉಡುಪಿ: ಆಕಾಶದಲ್ಲಿ ನಕ್ಷತ್ರಗಳ ಚಲನೆಯನ್ನು ಗುರುತಿಸಬಹುದಾದ ಪ್ಲಾನಿಸ್ಪಿಯರ್ ಎಂಬ ನಕ್ಷೆಯನ್ನು ಅದಮಾರು ಮಠದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಉಡುಪಿಯಲ್ಲಿ ಅನಾವರಣಗೊಳಿಸಿದ್ದಾರೆ.

ಇದೇ ವೇಳೆ  ಒಂದು ವರ್ಷ ಪೂರ್ಣಗೊಳಿಸಿರುವ ಪಿಎಎಸಿ (ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘ) ವೆಬ್ ಸೈಟ್‌ಗೆ ಹಾಗೂ ಪ್ರೋತ್ಸಾಹ ನೀಡುತ್ತಿರುವ ತಂಡಕ್ಕೆ ಶ್ರೀಪಾದರು ಆಶೀರ್ವದಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಪಿಎಎಸಿ ತನ್ನ ವೆಬ್ ಸೈಟ್ ಮೂಲಕ ಜನರಿಗೆ ತಲುಪಿ ಆದ ಬೆಳವಣಿಗೆಯ ಜೊತೆಗೆ ಪ್ಲಾನಿಸ್ಪಿಯರ್ ಅನ್ನು ಬಳಸುವ ವಿಧಾನವನ್ನು, ವಿದ್ಯಾರ್ಥಿಗಳ ಶ್ರಮದ ಕುರಿತು ಸಂಯೋಜಕರಾದ ಅತುಲ್ ಭಟ್ ಮಾಹಿತಿ ನೀಡಿದರು.

ಈ ಸಂದರ್ಭ ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲರಾದ ಡಾ.ರಾಘವೇಂದ್ರ ಎ., ಭೌತಶಾಸ್ತ್ರ ವಿಭಾಗದ ಮುಖ್ಯಸ್ಥೆ  ಪ್ರತಿಭಾ ಸಿ. ಆಚಾರ್ಯ ಹಾಗೂ ಪಿಎಎಸಿ ವಿದ್ಯಾರ್ಥಿನಿ ಶುಭಶ್ರೀ ಶಣೈ ಉಪಸ್ಥಿತರಿದ್ದರು.

ಆಕಾಶದಲ್ಲಿ ನಕ್ಷತ್ರಗಳ ಚಲನೆಯನ್ನು ಗುರುತಿಸುವ ಹವ್ಯಾಸಿಗಳು ಅಥವಾ ಈ ಬಗ್ಗೆ ಮಾಹಿತಿ ಪಡೆಯ ಬೇಕು ಎನ್ನುವ ಆಸಕ್ತರು  https://paac.ppc.ac.in/planisphere   ಈ ವೆಬ್‌ಸೈಟ್‌ಗೆ ಭೇಟಿ ನೀಡಿ ಪ್ಲಾನಿಸ್ಪಿಯರ್‌ನ್ನು  ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಇದರಲ್ಲಿ ನಿಮಗೆ ಮಾಹಿತಿಯು ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ಲಭ್ಯವಿದ್ದು ಅದನ್ನು ಪಿಎಎಸಿ ವೆಬ್‌ಸೈಟ್‌ನಿಂದ ಪಡೆಯಬಹುದಾಗಿದೆ. 

Leave a Reply

Your email address will not be published. Required fields are marked *

error: Content is protected !!