ಸಂಘಟನಾತ್ಮಕ ಗೆಲುವು ಸಾಧಿಸಿವುದು ನಮ್ಮ ಗುರಿ: ನಳಿನ್ ಕಟೀಲ್
ಉಡುಪಿ: (ಉಡುಪಿ ಟೈಮ್ಸ್ ವರದಿ)ಮುಂದಿನ ದಿನಗಳಲ್ಲಿ ಸಂಘಟನಾತ್ಮಕ ಗೆಲುವುಗಳನ್ನು ಸಾಧಿಸಬೇಕು ಎನ್ನುವ ನಿಟ್ಟಿನಲ್ಲಿ ಪಂಚರತ್ನ ಎಂಬ ಹೊಸ ಪರಿಕಲ್ಪನೆಯನ್ನು ಇಟ್ಟುಕೊಂಡು ಚುನಾವಣೆ ಗೆಲ್ಲುವ ಗುರಿಯನ್ನು ಹೊಂದಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಉಡುಪಿಯಲ್ಲಿ ಇಂದು ಈ ಕುರಿತು ಮಾಹಿತಿ ನೀಡಿ ಮಾತನಾಡಿದ ಅವರು, ರಾಜ್ಯದ 31ಜಿಲ್ಲೆಗಳಲ್ಲಿ ಗ್ರಾಮ ಪಂಚಾಯತ್ ಚುನಾವಣೆಗಳು ನಡೆಯಲಿದೆ. ಈ ಗ್ರಾಮ ಪಂಚಾಯತ್‌ಗಳಲ್ಲಿ 96 ಸಾವಿರ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದು ಈ ಪೈಕಿ 80 ಶೇ. ಗೆಲುವಿನ ಗುರಿಯನ್ನು ಹೊಂದಲಾಗಿದೆ. ಇದಕ್ಕಾಗಿ ಪಂಚರತ್ನ ಎಂಬ ಕಲ್ಪನೆಯಡಿಯಲ್ಲಿ ಮುಂದಿನ ಚುನಾಚಣೆಯನ್ನು ಗೆಲ್ಲುವ ಗುರಿಯನ್ನು ಹೊಂದಿದ್ದು, ಪಂಚ ಸೂತ್ರ ಎಂಬ ಹೊಸ ಕಲ್ಪನೆಯನ್ನೂ ಅಳವಡಿಸಿಕೊಂಡು ಗ್ರಾಮ ಸ್ವರಾಜ್ ಸಮಾವೆಶವನ್ನು ನಡೆಸಲಾಗುತ್ತಿದೆ. ಈ ಗ್ರಾಮ ಸ್ವರಾಜ್ ಸಮಾವೆಶದ ಪರಿಕಲ್ಪನೆಯೇ ಪಂಚಾಯತ್ ಚುನಾವಣೆಯ ಪೂರ್ವ ತಯಾರಿಯಾಗಿದ್ದು, ಈ ಕನಸನ್ನು ಸಕಾರಗೊಳಿಸಲುವ ಸಲುವಾಗಿ, ಇಡೀ ರಾಜ್ಯದಲ್ಲಿ ಕಾರ್ಯಕರ್ತರು ಕೆಲಸ ಪ್ರಾರಂಭ ಮಾಡಬೇಕು, ರಾಜ್ಯ ಮತ್ತು ಕೇಂದ್ರ ಸರಕಾರದ ಸಾಧನೆಗಳು, ಪಂಚಾಯತ್‌ಗಳಿಗೆ ಕೊಟ್ಟಿರುವಂತಹ ಯೋಜನೆಗಳು, ಅನುದಾನಗಳ ಕುರಿತು ಜನಸಾಮಾನ್ಯರಿಗೆ ತಿಳಿಯಪಡಿಸಬೇಕು ಎಂದರು.
ಇದರ ಪೂರ್ವ ತಯಾರಿಗಾಗಿ ಡಿಸಿಎಂ ಅಶ್ವತ್ ನಾರಾಯಣ, ಉಡುಪಿ ಚಿಕ್ಕಮಗಳೂರು ಸಂಸ0ದೆ ಶೋಭಾ ಕರಂದ್ಲಾಜೆ, ಎಂಪಿ ಮುನಿರತ್ನ, ಮಹಿಳಾ ಮೋರ್ಚಾದ ಅಧ್ಯಕ್ಷೆ ಗೀತಾ ವಿವೇಕಾನಂದ ಅವರನ್ನೊಳಗೊಂಡ ತಂಡ ರಚಿನೆಗೊಂಡಿದೆ. ಇಂದು ಈ ತಂಡದ ಕಾರ್ಯಕ್ರಮ ಉಡುಪಿಯಲ್ಲಿ ಉದ್ಘಾಟನೆಗೊಂಡು 2 ಸಮಾವೇಶ ನಡೆಯಲಿದೆ. ಒಂದೊ0ದು ತಂಡದಲ್ಲಿ 5 ಜಿಲ್ಲೆ ಒಳಗೊ0ಡಿದ್ದು ಒಂದು ಜಿಲ್ಲಯಲ್ಲಿ 2 ಸಮಾವೇಶ ನಡೆಸುವ ಉದ್ದೇಶವನ್ನು ಹೊಂದಲಾಗಿದೆ. ರಾಜ್ಯದ ಎಲ್ಲಾ 5808 ಗ್ರಾಮ ಪಂಚಾಯತ್ ಗುರಿಯಲ್ಲಿಟ್ಟುಕೊಂಡು 6 ತಂಡಗಳ ರಚನೆ ಮಾಡಿ, 62 ಸಮಾವೇಶಗಳು ನಡೆಸುವ ಉದ್ದೇಶವನ್ನು ಹೊಂದಲಾಗಿದೆ ಎಂದರು.