ಸಂವಿಧಾನ ಒಪ್ಪದವರು ದೇಶ ಬಿಟ್ಟು ತೊಲಗಲಿ: ಜಯನ್ ಮಲ್ಪೆ
ಮಲ್ಪೆ: (ಉಡುಪಿಟೈಮ್ಸ್ ವರದಿ)ಪ್ರಜೆಗಳಲ್ಲಿ ತೀವ್ರ ಮಟ್ಟದ ದೇಶಭಕ್ತಿಯ ಭಾವನೆಯನ್ನು ಉದ್ದೀಪಿಸುವುದಕ್ಕಾಗಿ ರಣಕಹಳೆಯೂದುವ ನಾಯಕರ ಬಗ್ಗೆ ಎಚ್ಚರಿಕೆ ವಹಿಸಿ,ದೇಶಭಕಿ ಎನ್ನುವುದು ಎರಡಲಗಿನ ಖಡ್ಗವಿದ್ದಂತೆ ಹಾಗಾಗಿ ಸಂವಿಧಾನವನ್ನು ಒಪ್ಪದವರು ದೇಶ ಬಿಟ್ಟು ತೊಲಗಲಿ ಎಂದು ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಹೇಳಿದ್ದಾರೆ.
ಅವರು ಇಂದು ಮಲ್ಪೆಯ ಸರಸ್ವತಿ ಬಯಲು ರಂಗಮಂದಿರದಲ್ಲಿ ಅಂಬೇಡ್ಕರ್ ಯುವಸೇನೆ ಆಯೋಜಿಸಿದ ‘ಭಾರತದ ಸಂವಿಧಾನ ಅರ್ಪಣಾ ದಿನ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ. ಸಂವಿಧಾನ ಎಂದರೆ ಮೀಸಲಾತಿ ಎಂದು ನಮ್ಮ ದೇಶದ ಬಹುತೇಕ ಜನರು ತಿಳಿದುಕೊಂಡಿದ್ದಾರೆ.ಇದು ತಪ್ಪು ಕಲ್ಪನೆ.ಸಂವಿಧಾನದಲ್ಲಿ ಸಾಮಾಜಿಕವಾಗಿ,ಆರ್ಥಿಕವಾಗಿ,ರಾಜಕೀಯವಾಗಿ ಹಿಂದುಳಿದ ಎಲ್ಲಾ ಜಾತಿ, ಧರ್ಮದವರಿಗೆ ವಿಶೇಷ ಸೌಲಭ್ಯ ನೀಡಿದೆ.ಎಲ್ಲಕ್ಕಿಂತ ಹೆಚ್ಚಾಗಿ ದೇಶದ ಮಹಿಳೆಯರಿಗೆ ಘನತೆಯನ್ನು ತಂದು ಕೊಟ್ಟಿದ್ದು ಸಂವಿಧಾನ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಬೇಡ್ಕರ್ ಯುವಸೇನೆಯ ಅಧ್ಯಕ್ಷ ಹರೀಶ್ ಸಾಲ್ಯಾನ್ ವಹಿಸಿದ್ದರು. ಮುಖ್ಯ ಅತಿಥಿಗಳಾದ ಹಿರಿಯ ದಲಿತ ಮುಖಂಡ ಸುಂದರ್ ಕಪ್ಪೆಟ್ಟು ಮಾತನಾಡಿ ನಮ್ಮ ಸಂವಿಧಾನ ಉಳಿದರೆ ನಮ್ಮ ದೇಶದ ಸಮಗ್ರತೆ,ಸಂಸ್ಕ್ರತಿ ಮತ್ತು ಜನರ ಬದುಕು ಉಳಿಯುತ್ತದೆ.ನಮ್ಮ ಸಂವಿಧಾನವು ಎಲ್ಲಿಯವರೆಗೆ ಸುರಕ್ಷಿತವಾಗಿರುತ್ತದೆಯೋ ಅಲ್ಲಿಯವರೆಗೆ ನಾವೆಲ್ಲರು ಸುರಕ್ಷಿತ ಇಲ್ಲವೇ ನಾವೆಲ್ಲರೂ ನಾಶವಾಗುತ್ತೇವೆ.ಆದ್ದರಿಂದ ಸಂವಿಧಾನವನ್ನು ನಾವು ರಕ್ಷಣೆ ಮಾಡಬೇಕು.ಅದನ್ನು ನಾವೆಲ್ಲರು ಕಾಪಾಡಬೇಕು ಎಂದರು.
ಅಂಬೇಡ್ಕರ್ ಯುಸೇನೆಯ ಉಪಾದ್ಯಕ್ಷ ಮಂಜುನಾಥ ಕಪ್ಪೆಟ್ಟು,ಸುಮಿತ್ ಮಲ್ಪೆ,ಕೃಷ್ಣ ಶ್ರೀಯಾನ್,ಸಂತೋಷ್ ಕಪ್ಪೆಟ್ಟು ಮೊದಲಾದವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ದಲಿತ ಮುಖಂಡರಾದ ಗುಣವಂತ ತೊಟ್ಟಂ, ಮಂಜುನಾಥ ಅಮ್ಮುಂಜೆ,ಪ್ರಶಾಂತ್ ಕಾಂಚನ್ ನೆರ್ಗಿ,ಹರೀಶ್ ಅಮೀನ್,ಕೃಷ್ಣ ಬಂಗೇರ,ರಾಮೋಜಿ ಅಮೀನ್ ಕೊಳ,ಲಕ್ಮಣ ನೆರ್ಗಿ,ನಿಹಾಲ್,ಯಶೋದ ನೆರ್ಗಿ, ಶರೀನ, ಸುಮ, ವಿನೋದ, ಪೂರ್ಣಿಮಾ, ಪ್ರಶಾಂತ್ ಬಿ.ಎನ್,ಅರುಣ್ ಸಾಲ್ಯಾನ್,ನಿತೇಶ್,ವಸಂತಿ ನೆರ್ಗಿ ಮೊದಲಾದವರು ಉಪಸ್ಥಿತರಿದ್ದರು. ಯುವಸೇನೆಯ ಪ್ರಸಾದ್ ನೆರ್ಗಿ ಸ್ವಾಗತಿಸಿ,ಸುಶೀಲ್ ಕುಮಾರ್ ಕೊಡವೂರು ವಂದಿಸಿದರು. ಭಗವಾನ್ ನೆರ್ಗಿ ಕಾರ್ಯಕ್ರಮ ನಿರೂಪಿಸಿದರು.