ಭೂಪರಿವರ್ತನೆಗೆ ಲಂಚ ಸ್ವೀಕರಿಸಿದ್ದ ಗ್ರಾಮ ಕರಣಿಕನಿಗೆ 3 ವರ್ಷ ಶಿಕ್ಷೆ

ಉಡುಪಿ: ಭೂಪರಿವರ್ತನೆಗೆ ಲಂಚಕ್ಕೆ ಬೇಡಿಕೆ ಇಟ್ಟ ಗ್ರಾಮ ಕರಣಿಕನಿಗೆ ಕುಂದಾಪುರ ನ್ಯಾಯಾಲಯವು ಆರೋಪಿಗೆ 3 ವರ್ಷ ಶಿಕ್ಷೆ ಹಾಗೂ ಮೂವತ್ತು ಸಾವಿರ ದಂಡ ವಿಧಿಸಿ ತೀರ್ಪನ್ನು ನೀಡಿರುತ್ತಾರೆ.

ಘಟನೆ ವಿವರ: 2011 ಮಾರ್ಚ್15 ರಂದು ತೆಕ್ಕಟ್ಟೆ ಮೋಹಿನಿಯವರು ಮನೆಕಟ್ಟುವ ಸಲುವಾಗಿ ಜಾಗದ ಭೂಪರಿವರ್ತನೆ ಬಗ್ಗೆ ಗ್ರಾಮ ಕರಣಿಕರ ಕಛೇರಿಗೆ ಹೋಗಿ ಗ್ರಾಮ ಕರಣಿಕರಾದ ಮಂಜುನಾಥ ಹೆಚ್.ಆರ್ ರವರಲ್ಲಿ ವಿಚಾರಿಸಿದಾಗ ಜಾಗದ ಭೂಪರಿವರ್ತನೆ ಮಾಡಲು ರೂ 15000 ಖರ್ಚು ಇದೆ ಎಂಬುದಾಗಿ ತಿಳಿಸಿ ಮುಂಗಡ ರೂ 8000 ಹಣವನ್ನು ಪಡೆದಿದ್ದರು. ಕನ್‌ವರ್ಷನ್ ಪೇಪರ್ ರೆಡಿ ಇದೆ ಅದನ್ನು ಕೊಡಲು ಲಂಚದ ಹಣ ರೂ. 7000 ವನ್ನು ಕೊಡಬೇಕೆಂದು ಬೇಡಿಕೆ ಸಲ್ಲಿಸಿದ್ದರು.

ಈ ಬಗ್ಗೆ ಮೋಹಿನಿಯವರ ಮಗ ವಿಕ್ರಮ್ ಗ್ರಾಮ ಕರಣಿಕ ಮಂಜುನಾಥ್ ಲಂಚಕ್ಕೆ ಬೇಡಿಕೆ ಇಟ್ಟಿರುವುದರ ವಿರುದ್ದ ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ಕರ್ನಾಟಕ ಲೋಕಾಯುಕ್ತ ಉಡುಪಿ ಠಾಣೆಯ ಆಗಿನ ಪೊಲೀಸ್ ನಿರೀಕ್ಷಕರಾದ ಸಿ.ಇ ತಿಮ್ಮಯ್ಯ ರವರು ವಿಕ್ರಮ ಕಾಮತ್ ಇವರ ದೂರನ್ನು ದಾಖಲಿಸಿಕೊಂಡು ಆರೋಪಿತರನ್ನು ಹಣ ಸ್ವೀಕರಿಸಿದ ಸಮಯ ಬಲೆ ಬೀಸಿ ಟ್ರ್ಯಾಪ್ ಮಾಡಿ ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.

ನಂತರ ಈ ಪ್ರಕರಣವು ಹೆಚ್ಚುವರಿ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯ ಕುಂದಾಪುರಕ್ಕೆ ವರ್ಗಾವಣೆಗೊಂಡು, ವಿಚಾರಣೆಗೆ ಒಳಪಟ್ಟಿತ್ತು. ಇಂದು ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶರಾದ ನರಹರಿ ಪ್ರಭಾಕರ ಮರಾಠೆ ಇವರು ಆರೋಪಿ ಮಂಜುನಾಥ ಹೆಚ್. ಆರ್ ಗೆ ರೂ. 10000- ದಂಡ ಮತ್ತು 1 ವರ್ಷ ಶಿಕ್ಷೆ ಮತ್ತು ಕಲಂ 13(2) ರಲ್ಲಿ ರೂ 20000 ಮತ್ತು 2 ವರ್ಷ ,ಒಟ್ಟು 3 ವರ್ಷ ಶಿಕ್ಷೆ ವಿಧಿಸಿ ಪ್ರಕರಣದ ತೀರ್ಪನ್ನು ನೀಡಿರುತ್ತಾರೆ.

ಈ ಪ್ರಕರಣದಲ್ಲಿ ಲೋಕಾಯುಕ್ತದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆದ ಟಿ. ವಿಜಯ್ ಕುಮಾರ್ ಶೆಟ್ಟಿ, ಇಂದ್ರಾಳಿಯವರು ಸರ್ಕಾರದ ಪರವಾಗಿ ವಾದ ಮಂಡಿಸಿರುತ್ತಾರೆ.

1 thought on “ಭೂಪರಿವರ್ತನೆಗೆ ಲಂಚ ಸ್ವೀಕರಿಸಿದ್ದ ಗ್ರಾಮ ಕರಣಿಕನಿಗೆ 3 ವರ್ಷ ಶಿಕ್ಷೆ

  1. ಭೂ ಪರಿವರ್ತನೆ ಆಗಲಿ ಇನ್ನೇನು ಆಗಿರಲಿ ಪ್ರತಿಯೊಬ್ಬರು ಪ್ರತಿ ಕೆಲಸಕ್ಕೆ ಲಂಚ ತಗೊಂಡಿದ್ದಾರೆ ಲಂಚ ಕೊಡಲ್ಲ ಅಂದ್ರೆ ನಮ್ಮ ಕೆಲಸ ಆಗಲ್ಲ ಆದರೆ ಲಂಚ ಕೊಡುವುದು ಕಾನೂನು ಪ್ರಕಾರ ತಪ್ಪು ಹಾಗಂತ ನಾವು ಲಂಚ ಕೊಡದಿದ್ದರೆ ನಮ್ಮ ಎರಡು ದಿನಗಳ ಕಳಸ ಎರಡು ವರ್ಷ ಮಾಡುತ್ತಾರೆ .

Leave a Reply

Your email address will not be published. Required fields are marked *

error: Content is protected !!