ಪೊಲೀಸ್ ಬೆಂಗಾವಲಿನಿಂದ ಕೊಲೆ ಪ್ರಕರಣದ ಆರೋಪಿ ಪರಾರಿ, ಲುಕ್ ಔಟ್ ನೋಟಿಸ್ ಜಾರಿ!

ಸುಳ್ಯ: ಕೇರಳ ಪೊಲೀಸರ ಕಣ್ತಪ್ಪಿಸಿ ಕೊಲೆ ಪ್ರಕರಣದ ಆರೋಪಿಯೊಬ್ಬ ಪರಾರಿಯಾದ ಘಟನೆ ಸುಳ್ಯದಲ್ಲಿ ನಡೆದಿದೆ . ಕಾಸರಗೋಡು ಜಿಲ್ಲೆಯ ಸೀತಾಂಗೋಳಿ ನಿವಾಸಿ ಅಬ್ದುಲ್ ಅಝೀಜ್ ಪರಾರಿಯಾದ ಆರೋಪಿ. ಈತ ಕಾಸರಗೋಡು ಜಿಲ್ಲೆಯ ಬೇಕಲ್ ಸ್ಟೇಷನ್ ವ್ಯಾಪ್ತಿಯಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾನೆಂದು ಆರೋಪಿಸಲಾಗಿದೆ.

ಇದೀಗ ಕೇರಳ ಪೊಲೀಸರ ಬೆಂಗಾವಲಿನಿಂದ ಆರೋಪಿ ಪರಾರಿಯಾಗಿದ್ದಾನೆ .ಈತನ ಸುಳಿವು ಸಿಕ್ಕಲ್ಲಿ ಜಿಲ್ಲಾ ವರಿಷ್ಠಾಧಿಕಾರಿ ( 9480805301), ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕರು ( 9480805334), ಸುಳ್ಯ ಉಪನಿರೀಕ್ಷಕರು (9480805365), ಸುಳ್ಯ ಪೊಲೀಸ್ ಠಾಣೆ (08257 230337)ಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.

ಇನ್ನು ಪರಾರಿಯಾಗಿ ತಲೆ ಮರೆಸಿಕೊಂಡಿರುವ ಆರೋಪಿಯ ಬಗ್ಗೆ ಮಾಹಿತಿ ನೀಡಿದವರಿಗೆ 2ಲಕ್ಷ ಬಹುಮಾನ ನೀಡಲಾಗುವುದು ಎಂದು ಘೋಷಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!