ಡಾ|ಕಾತ್ಯಾಯಿನಿ ಕುಂಜಿಬೆಟ್ಟು ಇವರಿಗೆ ‘ಕನಕ ಯುವ ಪುರಸ್ಕಾರ’
ಬೆಂಗಳೂರು: ಕರ್ನಾಟಕ ಸರಕಾರ, ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರದ ವತಿಯಿಂದ ನೀಡಲಾಗುವ 2019-20 ನೇ ಸಾಲಿನ ಕನಕ ಯುವ ಪುರಸ್ಕಾರಕ್ಕೆ ಡಾ|ಕಾತ್ಯಾಯಿನಿ ಕುಂಜಿಬೆಟ್ಟು ಆಯ್ಕೆಯಾಗಿರುತ್ತಾರೆ. ಪುರಸ್ಕಾರದ ಮೊತ್ತವು 50,000/- (ಐವತ್ತು ಸಾವಿರ) ಗಳಾಗಿದ್ದು, ಪ್ರಶಸ್ತಿ ಫಲಕ ವನ್ನು ಒಳಗೊಂಡಿರುತ್ತದೆ.
ಡಿಸೆಂಬರ್ 3 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ನಡೆಯಲಿರುವ ಕನಕ ಜಯಂತಿ ಆಚರಣೆಯ ಸಂದರ್ಭದಲ್ಲಿ ಈ ಪುರಸ್ಕಾರ ಪ್ರಧಾನ ಮಾಡಲಾಗುವುದು.