ಮೂಡುಬಿದ್ರೆ: ಮದುವೆ ಮನೆಗೆ ಬಂದ ನಾಲ್ವರು ನದಿಯಲ್ಲಿ ಮುಳುಗಿ ಸಾವು
ಮೂಡುಬಿದ್ರೆ: (ಉಡುಪಿ ಟೈಮ್ಸ್ ವರದಿ)ಕಡಂದಲೆಯ ಶಾಂಭವಿ ನದಿಗೆ ಈಜಾಡಲು ಹೋದ ನಾಲ್ವರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.
ಕಡಂದಲೆ ಶ್ರೀಧರ ಆಚಾರ್ಯ ಮನೆಗೆ ಮದುವೆಗೆಂದು ಬಂದವರು ಶಾಂಭವಿ ನದಿಗೆ ಈಜಲು ಹೋದಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.
ವಾಮಂಜೂರಿನ ಮೂಡುಶೆಡ್ಡೆಯ ನಿಖಲ್(18), ಅರ್ಶಿತಾ(20), ವೇಣೂರಿನ ಸುಭಾಸ್(19), ಪೆರಾರದ ರವಿ(30) ಮೃತರೆಂದು ಸ್ಥಳಿಯರು ತಿಳಿಸಿದ್ದಾರೆ.