ನ. 26 ದೇಶದಾದ್ಯಂತ ಮುಷ್ಕರಕ್ಕೆ ಉಡುಪಿ ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘ ಬೆಂಬಲ
ಉಡುಪಿ: ಕೇಂದ್ರ ಮತ್ತು ರಾಜ್ಯ ಸರಕಾರಗಳು ಜಾರಿಗೆ ತಂದ ಕಾರ್ಮಿಕರ ಕಾಯಿದೆ ತಿದ್ದುಪಡಿ, ರೈತ ವಿರೋಧಿ ಕಾಯಿದೆಗಳನು ವಿರೋಧಿಸಿ ನವೆಂಬರ 26ರಂದು ಕಾರ್ಮಿಕ ಸಂಘಗಳು ನೀಡಿದ ಮುಷ್ಕರದ ಕರೆಯನ್ನು ಉಡುಪಿ ಜಿಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘ ಸಂಪೂರ್ಣ ಬೆಂಬಲ ನೀಡುತ್ತದೆ. ಆ ದಿನ ಕಟ್ಟಡ ನಿರ್ಮಾಣ ಕಾರ್ಮಿಕರ ಕೆಲಸವನ್ನು ಸ್ಥಗಿತಗೊಳಿಸಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಭಾಗವಹಿಸುವರು ಕೇಂದ್ರ ಸರಕಾರವು ಕಟ್ಟಡ ಕಾರ್ಮಿಕರಿಗೆ ಸಂಬಂಧಪಟ್ಟ ಕಾಯಿದೆಗಳಿಗೂ ತಿದ್ದುಪಡಿ ಮಾಡಿದ್ದು ಸೆಸ್ ಕಾಯಿದೆಯನ್ನು ರದ್ದು ಮಾಡಿದೆ. ಇದರಿಂದ ಕಲ್ಯಾಣ ಮಂಡಳಿಗೆ ಬರುವ ಆದಾಯ ಕಡಿಮೆ ಆಗುತ್ತದೆ. ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಕಾಯಿದೆಯನ್ನು ಇತರೆ 9 ಕಾಯಿದೆಗಳೊಂಡಿಗೆ ವಿಲೀನ ಗೊಳಿಸಿರುವುದರಿಂದ ಕಟ್ಟಡ ಕಾರ್ಮಿಕರ ಈಗ ಸಿಗುತ್ತಿರುವ ಸೌಲಭ್ಯಗಳಿಂದ ವಂಚಿತ ಆಗುತ್ತಾರೆ. ಗ್ರಾಮೀಣ ಪ್ರದೇಶದಲ್ಲಿ ಹಸಿರು ವಲಯದ ಕೃಷಿ ಭೂಮಿ ಹೆಸರಲ್ಲಿ ಭೂ ಪರಿವರ್ತನೆ ಗೆ ಅವಕಾಶ ಇಲ್ಲದೆ ಚಿಕ್ಕ ಚಿಕ್ಕ ಮನೆ ಕಟ್ಟುವವರಿಗೆ ತೊಂದರೆ ಆಗುತ್ತಿದೆ. ಇದರಿಂದ ಕಾರ್ಮಿಕರಿಗೆ ಕೆಲಸ ಇಲ್ಲದೆ ಬೀದಿಗೆ ಬೀಳುವಂತಾಗಿದೆ. ನ. 26ರ ಮುಷ್ಕರಕ್ಕೆ ಉಡುಪಿ ಜಿಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘ ನಿರ್ಧರಿಸಿದೆಂದು ಉಡುಪಿ ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಶೇಖರ್ ಬಂಗೇರ ಮತ್ತು ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. |