ಉಡುಪಿ: ಜಿ. ಶಂಕರ್ ಆರೋಗ್ಯ ಸುರಕ್ಷಾ ಕಾರ್ಡ್ ಅಭಿಯಾನ
ಉಡುಪಿ (ಉಡುಪಿ ಟೈಮ್ಸ್ ವರದಿ): ಜಿ. ಶಂಕರ್ ಆರೋಗ್ಯ ಸುರಕ್ಷಾ ಕಾರ್ಡ್ ಅಭಿಯಾನವು ದಿನಾಂಕ ನವಂಬರ್ 24 ರಂದು ಶಾರದಾಂಬ ದೇವಸ್ಥಾನ ಸಬಾಂಗಣದಲ್ಲಿ ನಡೆಯಿತು.
31ನೇ ಬೈಲೂರು ವಾರ್ಡ್ ಮತ್ತು ಆಸುಪಾಸಿನ ನಿವಾಸಿಗಳ ಆರೋಗ್ಯ ಸುರಕ್ಷಾ ಕಾರ್ಡನ್ನು ಮಾಡಿ ಕೊಡಲಾಯಿತು ಮತ್ತು ಸುರಕ್ಷಾ ಕಾರ್ಡ್ ಗಳ ಕುರಿತು ಮಾಹಿತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯರಾದ ರಮೇಶ್ ಕಾಂಚನ್ ,ಆಕಾಶ್ ರಾವ್ ,ಗೀತಾ ರವಿಚಂದ್ರ ,ಹಮ್ಮದ್ ಹಾಗೂ ಸತೀಶ್ ಪುತ್ರನ್ ಉಪಸ್ಥಿತರಿದ್ದರು.