ಶ್ರೀಕ್ಷೇತ್ರ ಅತ್ತೂರು ಪರ್ಪಲೆಗಿರಿ: ನ.26 ರಿಂದ 28 ವರೆಗೆ ಅಪ್ಟಮಂಗಲ ಪ್ರಶ್ನಾಚಿಂತನೆ

ಕಾರ್ಕಳ: ಅತ್ತೂರು ಗ್ರಾಮದ ಪರ್ಪಲೆ ಗುಡ್ಡದ ಮೇಲಿರು ದೈವ ಸಾನಿಧ್ಯದ ಪುನರ್ ನಿರ್ಮಾಣದ ನಿಮಿತ್ತ ಅತ್ತೂರು ಪರ್ಪಲೆ ಗಿರಿಯಲ್ಲಿ ಅಷ್ಟಮಂಗಳ ಪ್ರಶ್ನಾಚಿಂತನೆ ಮತ್ತು ಜೀರ್ಣೋದ್ದಾರ ಸಂಕಲ್ಪ ಸಭೆ ನ. 26 ರಿಂದ 28 ವರಗೆ ನಡೆಯಲಿದೆ.

ಈ ಬಗ್ಗೆ ಇಂದು ಉಡುಪಿಯಲ್ಲಿ ಮಾಹಿತಿ ನೀಡಿರುವ ಸಮಿತಿ, ಮೂರು ದಿನಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮವನ್ನು ಕೇರಳದ ಪಯ್ಯನ್ನೂರಿನ ಖ್ಯಾತ ದೈವಜ್ಞರಾದ ನಾರಾಯಣ ಪೊದುವಾಲ್ ನಡೆಸಿಕೊಡಲಿದ್ದು, ಈ ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಭಾಗಗಳಿಂದ ಗಣ್ಯಾತಿಗಣ್ಯರು ಭಾಗವಹಿಸಲಿದ್ದಾರೆ ಎಂದು ಶ್ರೀ ಕೃಷ್ಣಗಿರಿ ಕಲ್ಕುಡ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಪ್ರಶಾಂತ್ ನಾಯಕ್ ತಿಳಿಸಿದರು.

ಈ ಅಷ್ಟ ಮಂಗಳ ಪ್ರಶ್ನಾ ಚಿಂತನೆಯಲ್ಲಿ ಕಾರ್ಕಳದ ಇತಿಹಾಸಕ್ಕೆ ಸಂಬoಧಿಸಿದ ಅನೇಕ ಸಂಗತಿಗಳು ಮುನ್ನೆಲೆಗೆ ಬರುವ ಸಾಧ್ಯತೆಯಿದೆ ಎಂದ ಅವರು, ಈ ಕಾರ್ಯಕ್ರಮದಲ್ಲಿ ಭಾವಹಿಸಲಿಚ್ಚಿಸುವವರಿಗೆ ಕಾರ್ಕಳ ಬಸ್ ನಿಲ್ದಾಣದಿಂದ ಬಸ್ಸಿನ ವ್ಯವಸ್ಥೆಯನ್ನು ಮಾಡಲಾಗಿದೆ. ಆಗಮಿಸುವ ಭಕ್ತಾದಿಗಳಿಗೆ ಅನ್ನಸಂತರ್ಪಣೆ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭ ಕಾರ್ಕಳ ಹಿಂದೂ ಜಾಗರಣ ವೇದಿಕೆಯ ತಾಲೂಕು ಕಾರ್ಯದರ್ಶಿ ಗುರುಪ್ರಸಾದ್ ಶೆಟ್ಟಿ ನಾರಾವಿ, ಚಂದ್ರ ಶೇಖರ್ ಶೆಟ್ಟಿ, ಮಹೇಶ ಶೆಣೈ ಬೈಲೂರು,  ದಿನೇಶ್ ಶೆಟ್ಟಿ ಹೆಬ್ರಿ, ರಿಕೇಶ್ ಪಾಲನ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!