ಸಂಪುಟ ರಚನೆಯೋ ಅಥವಾ ಪುನಾರಚನೆಯೋ ಕಾದು ನೋಡಿ: ನಳಿನ್ ಕುಮಾರ್ ಕಟೀಲ್
ದಾವಣಗೆರೆ : ಸಂಪುಟ ರಚನೆ ಅಥವಾ ಪುನಾರಚನೆ ಬಗ್ಗೆ ಯಾವುದೇ ಗೊಂದಲ ಇಲ್ಲ. ನಾಯಕತ್ವದ ಬದಲಾವಣೆಯ ಯಾವುದೇ ವಿಚಾರ ಇಲ್ಲ. ಈಗಾಗಲೇ ಮುಖ್ಯಮಂತ್ರಿಗಳು ಕೇಂದ್ರದ ನಾಯಕರ ಜೊತೆ ಮಾತನಾಡಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಇದಕ್ಕೆ ಸರಿಯಾದ ಉತ್ತರ ಸಿಗಲಿದೆ.
ಅದು ರಚನೆಯೋ ಪುನಾರಚನೆಯೋ ಎಂಬುದುದನ್ನು ನೀವೇ ಕಾದು ನೋಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ದಾವಣಗೆರೆಗೆಯಲ್ಲಿ ಸಿಎಂ ಭೇಟಿ ವಿಚಾರಕ್ಕೆ ಸಂಬ0ಧಿಸಿ ಪ್ರತಿಕ್ರಿಯೆ ನೀಡಿರುವ ಅವರು, ನಾವು ಸಹಜವಾಗಿ ಭೇಟಿಯಾಗುತ್ತೇವೆ ಅಲ್ಲದೆ, ಪ್ರತಿ 15 ದಿನಕ್ಕೊಮ್ಮೆ ನಾವು ಸಿಎಂ ಭೇಟಿಯಾಗುತ್ತೇವೆ ಅದರಲ್ಲಿ ಯಾವುದೇ ಹೊಸತನವಿಲ್ಲ ಎಂದಿದ್ದಾರೆ.
ನಿಗಮ ಮಂಡಳಿಗೆ 500 ಕೋಟಿ ಮೀಸಲಿಟ್ಟಿರುವ ವಿಚಾರವಾಗಿ ಮಾತನಾಡಿದ ಅವರು ಬೇಡಿಕೆ ಇದ್ದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಈ ತೀರ್ಮಾನ ತೆಗೆದುಕೊಂಡಿದ್ದಾರೆ. ಸರಕಾರ ನಡೆಸುವಾಗ ಎಲ್ಲಾ ಸಮಾಜವನ್ನು ಸರಿದೂಗಿಸಿಕೊಂಡು ಹೋಗಬೇಕಾಗುತ್ತದೆ ಹಾಗಾಗಿ ಮುಂದಿನ ದಿನಗಳಲ್ಲಿ ಎಲ್ಲಾ ಸಮುದಾಯಕ್ಕೂ ನ್ಯಾಯ ಸಿಗಲಿದೆ ಎಂದರು.