ನ. 24 (ನಾಳೆ) ಚಿಟ್ಪಾಡಿಯಲ್ಲಿ ಜಿ. ಶಂಕರ್ ಆರೋಗ್ಯ ಸುರಕ್ಷಾ ಕಾರ್ಡ್ ಅಭಿಯಾನ
ಉಡುಪಿ: ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ, ಮೊಗವೀರ ಯುವ ಸಂಘಟನೆ ಹಾಗೂ ಮಣಿಪಾಲ ಸಿಗ್ನಾ ಹೆಲ್ತ್ ಇನ್ಸುರೆನ್ಸ್ ಕಂಪೆನಿ ಮತ್ತು ಮಾಹೆ ಮಣಿಪಾಲ್ ಸಹಕಾರದೊಂದಿಗೆ ಜಿ. ಶಂಕರ್ ಆರೋಗ್ಯ ಸುರಕ್ಷಾ ಕಾರ್ಡ್ ಅಭಿಯಾನ ನ.24 ರಂದು ಚಿಟ್ಪಾಡಿ ಶಾರದಾಂಬ ಮಂದಿರದಲ್ಲಿ ಮಧ್ಯಾಹ್ನ 2.30ರಿಂದ 5 ಗಂಟೆವರೆಗೆ ನಡೆಯಲಿದೆ.
ಈ ಆರೋಗ್ಯ ಕಾರ್ಡ್ ಪಡೆಯಲಿಚ್ಚಿಸುವವರು ಈ ಅಭಿಯಾನದಲ್ಲಿ ಪಾಲ್ಗೊಳ್ಳಬೇಕೆಂದು ಬೈಲೂರು ವಾರ್ಡಿನ ನಗರ ಸಭಾ ಸದಸ್ಯರಾದ ರಮೇಶ್ ಕಾಂಚನ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9844192340