ವಕ್ಫ್ ಸಂಸ್ಥೆಗಳ ಕರಾರು ನವೀಕರಣಕ್ಕೆ ಸೂಚನೆ
ಮಂಗಳೂರು:- ದಕ್ಷಿಣ ಕನ್ನಡ ಜಿಲ್ಲೆಯ ವಕ್ಫ್ ಸ್ವತ್ತುಗಳಲ್ಲಿ ನಿರ್ಮಾಣಗೊಂಡು ಬಾಡಿಗೆ ನೀಡಿರುವ ವಸತಿ, ವಾಣಿಜ್ಯ ಕಟ್ಟಡಗಳ ಪ್ರಸ್ತುತ ಬಾಡಿಗೆ ದರವು ಮಾರುಕಟ್ಟೆ ದರಕ್ಕಿಂತ ಕಡಿಮೆ ಇರುವುದರಿಂದ ವಕ್ಫ್ ಸಂಸ್ಥೆಗಳ ಆದಾಯಕ್ಕೆ ಹೊಡೆತ ನೀಡುತ್ತಿದೆ.
ವಕ್ಫ್ ಸಂಸ್ಥೆಯ ಆಡಳಿತ ಸಮಿತಿಗಳು ತಮ್ಮ ಅಧೀನದಲ್ಲಿರುವ ಬಾಡಿಗೆಗೆ ನೀಡಿರುವ ವಸತಿ ಹಾಗೂ ವಾಣಿಜ್ಯ ಕಟ್ಟಡಗಳ ಬಾಡಿಗೆ ದರಗಳನ್ನು ವಕ್ಫ್ ಲೀಸ್ ನಿಯಮಾವಳಿ 2014 ರಂತೆ ಮಾರುಕಟ್ಟೆ ದರಕ್ಕೆ ಸಮಾನಾಗಿ ಹೆಚ್ಚಿಸಿ ಎಲ್ಲಾ ಬಾಡಿಗೆದಾರರು 11 ತಿಂಗಳ ಕರಾರನ್ನು ನವೀಕರಿಸಿಕೊಳ್ಳಬೇಕೆಂದು ಸೂಚಿಸಿದೆ.
ನವೀಕೃತ ಕರಾರಿನ ಪ್ರತಿಗಳನ್ನು ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಕಚೇರಿಗೆ ಸಲ್ಲಿಸಬೇಕೆಂದು ಜಿಲ್ಲಾ ವಕ್ಫ್ ಕಚೇರಿಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.