ಸ್ನಾನಕ್ಕೆಂದು ಸಮುದ್ರಕ್ಕಿಳಿದ ಯುವಕರು: ಓರ್ವ ಸಾವು, ಇನ್ನೋರ್ವ ಪಾರು
ಕುಂದಾಪುರ: ಸಮುದ್ರದಲ್ಲಿ ಮುಳುಗಿ ಯುವಕನೋರ್ವ ಮೃತಪಟ್ಟ ಘಟನೆ ಉಡಪಿ ಜಿಲ್ಲೆಯ ಕುಂದಾಪುರದ ಎಂ ಕೋಡಿ ಬೀಚ್‌ನಲ್ಲಿ ನಡೆದಿದೆ. ಮೃತರನ್ನು ಬೆಳಗಾವಿ ಜಿಲ್ಲೆಯ ರಾಮದುರ್ಗದ ಮಂಜುನಾಥ (33) ಎಂದು ಗುರುತಿಸಲಾಗಿದೆ.
ಕುಂದಾಪುರದಲ್ಲಿ ಕೂಲಿ ಕಾರ್ಮಿಕನಾಗಿ ದುಡಿಯುತ್ತಿದ್ದ ಮಂಜುನಾಥ್ ಇಂದು ಸ್ನೇಹಿತ ಜತೆಯಲ್ಲಿ ಬೀಚ್‌ಗೆ ಸ್ನಾನ ಮಾಡಲು ಬಂದಿದ್ದರು. ಈ ವೇಳೆ ಇಬ್ಬರೂ ಅಲೆಗಳ ಸೆಳೆತಕ್ಕೆ ಸಿಲುಕಿ ಮುಳುಗಿದ್ದಾರೆ. ಇದನ್ನು ಕಂಡ ಸ್ಥಳೀಯರು ಇಬ್ಬರ ರಕ್ಷಣೆಗೆ ಧಾವಿಸಿದಾದರೂ, ಓರ್ವನನ್ನು ಮಾತ್ರ ರಕ್ಷಣೆ ಮಾಡಲು ಸಾಧ್ಯವಾಯಿತು. ಈ ವೇಳೆ ಇನ್ನೋರ್ವ ಯುವಕ ನೀರಿನ ಸೆಳೆತಕ್ಕೆ ಸಿಲುಕಿ ನೀರುಪಾಲಾಗಿದ್ದು, ಮೃತ ಯುವಕನ ಶವವನ್ನು ಕುಂದಾಪುರದ ಶವಗಾರದಲ್ಲಿ ಇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.