ಮಚಾದೋ’ಸ್ ಗೋಲ್ಡನ್ ಕ್ವಿಜ್: ಉದ್ಯಾವರ ಪ್ರಥಮ, ಮೂಡುಬೆಳ್ಳೆ ದ್ವಿತೀಯ

ಉಡುಪಿ : ಐಸಿವೈಎಂ ಉದ್ಯಾವರ ಸುವರ್ಣ ಮಹೋತ್ಸವ ಸಂಭ್ರಮದ 32ನೇ ಕಾರ್ಯಕ್ರಮವಾಗಿ ನಡೆದ ಉಡುಪಿ ವಲಯ ಮಟ್ಟದ ದಿ. ಎಲಿಯಸ್ ಮಚಾದೋ ಸ್ಮರಣಾರ್ಥ, ಮಚಾದೋ’ಸ್ ಗೋಲ್ಡನ್ ಕ್ವಿಜ್ ಸ್ಪರ್ಧೆಯಲ್ಲಿ ಉದ್ಯಾವರ ಸಂತ ಫ್ರಾನ್ಸಿಸ್ ಜೇವಿಯರ್ ದೇವಾಲಯ ಪ್ರಥಮ ಸ್ಥಾನ ಗಳಿಸಿದರೆ, ಸಂತ ಲಾರೆನ್ಸರ ದೇವಾಲಯ ಮೂಡುಬೆಳ್ಳೆ ದ್ವಿತೀಯ ಸ್ಥಾನ ಗಳಿಸಿತು.

ಉದ್ಯಾವರ ಸಂತ ಫ್ರಾನ್ಸಿಸ್ ಜೇವಿಯರ್ ಸಭಾಂಗಣದಲ್ಲಿ ನಡೆದ ಕ್ವಿಜ್ ಸ್ಪರ್ಧೆಯಲ್ಲಿ ವಲಯದ 8 ತಂಡಗಳು ಭಾಗವಹಿಸಿದ್ದವು. ತೃತೀಯ ಸ್ಥಾನ ಕಟಪಾಡಿ ಸಂತ ವಿನ್ಸೆಂಟ್ ಡಿ ಪೌಲ್ ಚರ್ಚ್ ಪಾಲಾದರೆ, ಚತುರ್ಥ ಸ್ಥಾನ ಕುಂತಳನಗರ ಸಂತ ಅಂತೋನಿಯವರ ದೇವಾಲಯದ ಪಾಲಾಯಿತು.

ಕ್ವಿಜ್ ಸ್ಪರ್ಧೆಯ ಪ್ರಾಯೋಜಕರಾದ ಮತ್ತು ಸಿವೈಎ ಸಂಘಟನೆಯ ಮಾಜಿ ಅಧ್ಯಕ್ಷರಾದ ಡೊನಾಲ್ಡ್ ಮಚಾದೋ ಕಾರ್ಯಕ್ರಮ ವನ್ನು ಉದ್ಘಾಟಿಸಿ, ಕೊರೋನಾ ಮಹಾಮಾರಿಯ ನಡುವೆಯೂ ಸುವರ್ಣ ಮಹೋತ್ಸವ ಸಮಿತಿಯೂ, ಸಮಾಜಕ್ಕೆ ಮತ್ತು ಪರಿಸರಕ್ಕೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

 ಸಂತ ಫ್ರಾನ್ಸಿಸ್ ಜೇವಿಯರ್ ದೇವಾಲಯದ ಸಹಾಯಕ ಧರ್ಮಗುರು ವಂ. ರೊಲ್ವಿನ್ ಅರಾನ್ಹಾ ಮಾತನಾಡಿ, ಐಸಿವೈಎಂ ಉದ್ಯಾವರ ಸಂಘಟನೆ ಐವತ್ತು ವರ್ಷದ ಈ ಸಂಭ್ರಮದಲ್ಲಿದ್ದು, ಹಲವಾರು ಕನಸುಗಳನ್ನು ಕಂಡು ಕೊಂಡಿತ್ತು. ಆ ಕನಸುಗಳೆಲ್ಲವನ್ನೂ ಈಗ ನನಸು ಮಾಡುತ್ತಿರುವುದು  ನಿಜಕ್ಕೂ ಹೆಮ್ಮೆಯ ವಿಷಯ ಎಂದರು.

ಪ್ರಥಮ ಸ್ಥಾನಿ ಉದ್ಯಾವರ ತಂಡವು 7,777 ನಗದು ಮತ್ತು ಟ್ರೋಫಿ ಪಡೆದರೆ, ದ್ವಿತೀಯ ಸ್ಥಾನಿ ಮೂಡುಬೆಳ್ಳೆ 5,555 ನಗದು ಮತ್ತು ಟ್ರೋಫಿ ಪಡೆದುಕೊಂಡಿತು. ಉಡುಪಿ, ಕಲ್ಮಾಡಿ, ಪೆರಂಪಳ್ಳಿ, ಕುಂತಲನಗರ, ಕಟ್ಪಾಡಿ, ಎರ್ಮಾಳ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.

ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಲ್ಮಾಡಿ ಸ್ಟೆಲ್ಲಾ ಮಾರಿಸ್ ದೇವಾಲಯದ ಪ್ರಧಾನ ಧರ್ಮಗುರು ವಂ. ಆಲ್ಬನ್ ಡಿಸೋಜ ಮತ್ತು ಪಲಿಮಾರು ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ಜಿತೇಂದ್ರ ಫುರ್ಟಾಡೋ ಮಾತನಾಡಿ, ಉದ್ಯಾವರದಲ್ಲಿ ಹಲವಾರು ಪ್ರತಿಭೆಗಳಿವೆ. ಈ ಪ್ರತಿಭೆಗಳ ಮೂಲಕ ನಮ್ಮ ಉಡುಪಿ ವಲಯ ಮತ್ತು ಧರ್ಮಕ್ಷೇತ್ರದ ವ್ಯಾಪ್ತಿಯಲ್ಲಿ  ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ನಿಜಕ್ಕೂ ಶ್ರೇಷ್ಠ ಎಂದರು.’

ವೇದಿಕೆಯಲ್ಲಿ ಪಾಲನ ಮಂಡಳಿಯ ಉಪಾಧ್ಯಕ್ಷ ಮೆಲ್ವಿನ್ ನೊರೊನ್ಹಾ, ಪ್ರಾಯೋಜಕರಾದ ಡೊನಾಲ್ಡ್ ಮಚಾದೋ, ಆಗ್ನೆಸ್ ಮಚಾದೋ, ಐಸಿವೈಎಂ ಉದ್ಯಾವರ ಸುವರ್ಣ ಮಹೋತ್ಸವ ಸಮಿತಿಯ ನಿರ್ದೇಶಕರಾದ ಜೆರಾಲ್ಡ್ ಪಿರೇರಾ, ಐಸಿವೈಎಂ ಅಧ್ಯಕ್ಷ ರೋಯಲ್ ಕ್ಯಾಸ್ತಲಿನೊ ಉಪಸ್ಥಿತರಿದ್ದರು.

ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ಮೈಕಲ್ ಡಿಸೋಜ ಸ್ವಾಗತಿಸಿದರೆ, ಕೋಶಾಧಿಕಾರಿ ರೋಶನ್ ಕ್ರಾಸ್ತಾ ವಂದಿಸಿದರು. ರೊಸಾಲಿಯಾ ಕರ್ಡೋಜಾ ಮತ್ತು ಸ್ಟೀವನ್ ಕುಲಾಸೊ ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು. ಕ್ವಿಜ್ ಬಜಾರ್ ಮೂಡುಬಿದ್ರೆ  ಕ್ವಿಜ್ ಸ್ಪರ್ಧೆಯನ್ನು ನಡೆಸಿದರು.

Leave a Reply

Your email address will not be published. Required fields are marked *

error: Content is protected !!