ಮಲೈಕಾ ಸೊಸೈಟಿಯಿಂದ ಗ್ರಾಹಕರಿಗೆ ಕೋಟ್ಯಾಂತರ ರೂ. ವಂಚನೆ: ಶಾಖಾ ವ್ಯವಸ್ಥಾಪಕಿ ಸೆರೆ

ಮಂಗಳೂರು: ನಗರದಲ್ಲಿ ಕಾರ್ಯಾಚರಿಸುತ್ತಿದ್ದ ಸೊಸೈಟಿಯೊಂದು ಎಂಟನೂರಕ್ಕೂ ಹೆಚ್ಚು ಗ್ರಾಹಕರಿಗೆ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಮಂಗಳೂರಿನ ಮಲೈಕಾ ಮಲ್ಟಿ ಸ್ಟೇಟ್ ಕೋ ಆಪರೇಟಿವ್ ಸೊಸೈಟಿ ತನ್ನ ಗ್ರಾಹಕರಿಟ್ಟಿದ್ದ ನೂರಾರು ಕೋಟಿ ರೂ. ಹಿಂದಿರುಗಿಸದೆ ಪಂಗನಾಮ ಹಾಕಿದೆ. ಈ ಸಂಬಂಧ ಮಂಗಳೂರು ಶಾಖೆ  ವ್ಯವಸ್ಥಾಪಕಿಯನ್ನು ಸಿಸಿಬಿ  ಪೊಲೀಸರು ಬಂಧಿಸಿದ್ದಾರೆ.

ಮಂಗಳೂರಿನ ಬೆಂದೂರುವೆಲ್ ನಲ್ಲಿರುಯದಲ್ಲಿ ಪ್ರಧಾನ ಕಚೇರಿ ಹೊಂದಿರುವ ಮಲೈಕಾ ಸೊಸೈಟಿ ಮುಂಬೈ, ಬೆಂಗಳೂರು, ಮಂಗಳೂರು, ಗೋವಾಗಳಲ್ಲಿ ಶಾಖೆಗಳನ್ನು ಹೊಂದಿದೆ. ಉಳಿತಾಯ ಖಾತೆ, ನಿರಖು ಠೇವಣಿ ಖಾತೆ ಸೇರಿದಂತೆ ಹಲವಾರು ಖಾತೆಗಳ ಹೆಸರಲ್ಲಿ ಸಾವಿರಾರು ಮಂದಿಯಿಂದ ಕೋಟ್ಯಾಂತರ ರೂ. ಸಂಗ್ರಹಿಸಿದೆ. ಆದರೆ ಆ ಠೇವಣಿ ಅವಧಿ ಮುಗಿದು ನಗದು ಹಿಂದಿರುಗಿಸುವ ವೇಳೆ ಸೊಸೈಟಿಯ ನಿರ್ದೇಶಕರುಗಳು ನಾಪತ್ತೆಯಾಗಿದ್ದಾರೆ.

ಎಲೇರಿ ಕುಟ್ಟಿನೋ ನೀಡಿದ ದೂರಿನ ಹಿನ್ನೆಲೆ  ಎನ್‍ಸಿ.ಇ.ಪಿ.ಎಸ್ ಠಾಣೆ ಪೋಲೀಸರು ತನಿಖೆ ನಡೆಸಿ ಮಂಗಳೂರು ಶಾಖೆ ವ್ಯವಸ್ಥಾಪಕಿ ರೀನಾ ಜೋಶ್‍ ಎನ್ನುವವರನ್ನು ಬಂಧಿಸಿದ್ದಾರೆ. ಈ ವೇಳೆ ಸೊಸೈಟಿಗೆ ಸಂಬಂಧಪಟ್ಟ ಹಲವಾರು ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.

ಇದೀಗ ಪ್ರಧಾನ ಕಚೇರಿ ಬಂದ್ ಆಗಿದ್ದು ಇನ್ನೂ ಹಲವಾರು ಕಡೆಗಳಲ್ಲಿ ಶಾಖೆಗಳೂ ಸಹ ಮುಚ್ಚಿದೆ. ವಂಚನೆಗೊಳಗಾದ ನೂರಾರು ಮಂದಿ ಪಾಂಡೇಶ್ವರದ ನಾರ್ಕೋಟಿಕ್ ಮತ್ತು ಆರ್ಥಿಕ ಅಪರಾಧ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

ಸೊಸೈಟಿಯ ಸ್ಥಾಪಕರಾದ   ಗಿಲ್ಬರ್ಟ್ ಬ್ಯಾಪಿಸ್ಟ್, ಅವರ ಪತ್ನಿ ಮರ್ಸಿಲಿನ್ ಬ್ಯಾಪ್ಟಿಸ್ಟ್ ಸೇರಿ ನಿರ್ದೇಶಕರ ಮಂಡಳಿಯ 12  ಮಂದಿಯ ವಿರುದ್ಧ ದೂರು ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!