ರಾಷ್ಟ್ರ ಮಟ್ಟದ ವಿಡಿಯೋ ಸ್ಪರ್ಧೆ – “ನನ್ನ ಊರು ನನ್ನ ಹೆಮ್ಮ”
ಉಡುಪಿ(ಉಡುಪಿ ಟೈಮ್ಸ್ ವರದಿ): ನಿಮ್ಮ ಊರಿನ ವಿಶೇಷತೆಗಳ ಬಗ್ಗೆ ಜಗತ್ತಿಗೆ ತಿಳಿಸಲು ಇದೊಂದು ಅದ್ಬುತ ಅವಕಾಶ. ಜ್ಞಾನತರಂಗ ಪ್ರಸ್ತುತ ಪಡಿಸುವ “ನನ್ನ ಊರು ನನ್ನ ಹೆಮ್ಮೆ” ರಾಷ್ಟ್ರ ಮಟ್ಟದ ವಿಡಿಯೋ ಸ್ಪರ್ಧೆ ನಡೆಯಲಿದ್ದು ವಿಜೇತರಿಗೆ ನಗದು ಬಹುಮಾನ ಘೋಷಿಸಲಾಗಿದೆ.
ನಿಮ್ಮ ಊರಿನ ಜಾತ್ರೆ, ಕ್ಷೇತ್ರಗಳು,ಕೋಲ, ಉತ್ತಮ ಕಸಬುಗಳು, ನಿಮ್ಮ ಊರಿನ ವಿಡಿಯೋ ,ಪ್ರಸಿದ್ಧ ಸ್ಥಳಗಳು, ಊರಿನ ಸೌಂದರ್ಯ ಇನ್ನಿತರ ವಿಶೇಷತೆಗಳ ಚಿತ್ರಗಳ ಸ್ಲೈಡ್ ಶೋ, ಭಾಷಣ,ನೃತ್ಯ ,ಹಾಡು ,ನಾಟಕ ಮುಂತಾದ ಯಾವುದೇ ವಿಧಾನದಲ್ಲಿ ಪ್ರಚುರಪಡಿಸುವ ವಿಡಿಯೋದ ಮೂಲಕ ವಿವರಿಸಿ 5 ನಿಮಿಷದೊಳಗಿನ ಆಕರ್ಷಕ ವಿಡಿಯೋ ಮಾಡಿ ನವಂಬರ್ 25 ರೊಳಗೆ ಕಳುಹಿಸಿ ಕೊಡತಕ್ಕದ್ದು.
ಯೌಟ್ಯೂಬ್ ನಲ್ಲಿ ಪ್ರಚುರಪಡಿಸಲಾಗುವ ಈ ವಿಡಿಯೋಗಳಲ್ಲಿ ಅತ್ಯಂತ ಹೆಚ್ಚು ಜನಪ್ರಿಯತೆ ಪಡೆಯುವವುಗಳಿಗೆ ಬಹುಮಾನ ನೀಡಲಾಗುತ್ತದೆ. ತೀರ್ಮಾನಕಾರರ ತೀರ್ಮಾನವೇ ಅಂತಿಮವಾಗಿದ್ದು, ವಿಜೇತರರಿಗೆ ನಗದು ಬಹುಮಾನವಾಗಿ – ಪ್ರಥಮ ಬಹುಮಾನ 5,555 ,ದ್ವಿತೀಯ ಬಹುಮಾನ 3,333 ಹಾಗು ತೃತೀಯ ಬಹುಮಾನ 1,111 ನೀಡಲಾಗುವುದು, ಅಲ್ಲದೆ ಈ ಕಾರ್ಯಕ್ರಮದ ಪ್ರಾಯೋಜಕರಾದ ಹೆಸರಾಂತ ಸಂಸ್ಥೆಗಳಾದ “ಮೈ ರೋಡ್ ರನ್ನರ್” ಹಾಗೂ “ಶ್ಲೋಕ” ಕಡೆಯಿಂದ ಆಕಷ೯ಕ ಕೊಡುಗೆಗಳಿವೆ.
ಮೈ ರೋಡ್ ರನ್ನರ್ ವತಿಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ಸ್ಪರ್ದಿಗಳಿಗೆ ಉಡುಪಿ , ಮಂಗಳೂರು ,ಹಾಗು ಮೈಸೂರು ಸುತ್ತ ಮುತ್ತಲಿನ ಭಾಗದಲ್ಲಿ ಮೈ ರೋಡ್ ರನ್ನರ್ ಅಪ್ಲಿಕೇಶನ್ ನಲ್ಲಿ ಖರೀದಿಸಿದ ವಸ್ತುಗಳಿಗೆ 3 ಬಾರಿ ಉಚಿತ ಹೋಂ ಡೆಲಿವರಿ ನೀಡಲಾಗುವುದು ಮತ್ತು ವಿಜೇತರಿಗೆ ಮೈ ರೋಡ್ ರನ್ನರ್ ಅಪ್ಲಿಕೇಶನ್ ನಲ್ಲಿ ಖರೀದಿಸಿದ ವಸ್ತುಗಳಿಗೆ 1 ತಿಂಗಳ ಕಾಲ ಉಚಿತ ಹೋಂ ಡೆಲಿವರಿ ನೀಡಲಾಗುವುದು, ಮತ್ತೊಂದು ಪ್ರಾಯೋಜಕರಾದ ಶ್ಲೋಕ ಸಂಸ್ಥೆಯಿಂದ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಆಯ್ದ ವಸ್ತುಗಳ ಮೇಲೆ 40% ರಿಯಾಯಿತಿ ದರದಲ್ಲಿ ಲಭ್ಯವಿದೆ. ಎಂದು ಸಂಘಟಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 8884570077 ವಾಟ್ಸ್ ಅಪ್ ಮಾಡಬೇಕಾಗಿ ಸಂಘಟಕರು ತಿಳಿಸಿದ್ದಾರೆ.