ಶಾಲೆಗಳನ್ನು ಆರಂಭಿಸುವುದು ಎಷ್ಟು ಸರಿ: ಪಾಲಕರ ಪ್ರಶ್ನೆ
ಉಡುಪಿ : ಹೆಚ್ಚು ಕಡಿಮೆ ಪ್ರತೀ ಮನೆಯಲ್ಲಿ ವಿದ್ಯಾರ್ಥಿಗಳಿದ್ದಾರೆ. ಈ ವಿದ್ಯಾರ್ಥಿಗಳು ಒಂದು ಕಡೆ ಸೇರಿದಾಗ ಪ್ರತೀ ವಿದ್ಯಾರ್ಥಿಯ ಮನೆಯಿಂದ ಪ್ರತಿನಿಧಿಯನ್ನು ಕಳುಹಿಸಿದಂತೆ ಆಗುತ್ತದೆ. ಸಣ್ಣ ಮಕ್ಕಳಿಗೆ ಸೋಶಿಯಲ್ ಡಿಸ್ಟೆಂನ್ಸಿಂಗ್ ಬಗ್ಗೆ ಹೆಚ್ಚಿನ ಜ್ಞಾನವಿರುವುದಿಲ್ಲಾ. ಅವರು ಒಬ್ಬರನ್ನು ಒಬ್ಬರು ಮುಟ್ಟುವುದು, ಆಟವಾಡುವುದು, ತಿಂಡಿ ತಿನ್ನುವುದು, ನೀರು ಕುಡಿಯುವುದು ಇತ್ಯಾದಿ ಮಾಡುವಾಗ ಹೆಚ್ಚಿನ ನಿಯಂತ್ರಣ ಮಾಡುವುದು ಕಷ್ಟ ಸಾಧ್ಯ. ಈ ಒಂದು ಕೋವಿಡ್-19 ರೋಗ ಬಹಳ ವೇಗವಾಗಿ ಹಬ್ಬುತ್ತಿರುವುದರಿಂದ ಒಬ್ಬ ವಿದ್ಯಾರ್ಥಿಗೆ ರೋಗ ಹರಡಿದರೆ ಅದು ನೇರವಾಗಿ ಅವರ ಮನೆಗೆ ತಲುಪುತ್ತದೆ. ಅಲ್ಲದೆ ಒಂದು ಮನೆಯಲ್ಲಿ ಸೋಂಕಿತರು ಇದ್ದರೆ, ಅದು ಮಗುವಿನ ಮೂಲಕ ಇತರ ವಿದ್ಯಾರ್ಥಿಗೆ ಹರಡುವ ಸಾಧ್ಯತೆ ಇರುತ್ತದೆ. ಶಾಲೆಗಳನ್ನು ಪ್ರಾರಂಭಿಸುವುದರಿಂದ ಸಮುದಾಯ ಸೋಂಕಾಗಿ ಹರಡುವಲ್ಲಿ ಶಾಲೆಗಳು ಪ್ರಮುಖ ಪಾತ್ರ ವಹಿಸುವ ಸಾಧ್ಯತೆ ಇರುತ್ತದೆ. ಈ ನಿಟ್ಟಿನಲ್ಲಿ ಶಾಲೆಗಳನ್ನು ಪ್ರಾರಂಭಿಸುವ ಬಗ್ಗೆ ಸರಕಾರ, ಶಾಲಾ ವ್ಯವಸ್ಥಾಪಕ ಮಂಡಳಿ ಮತ್ತು ಮಕ್ಕಳ ಪಾಲಕರು ಸರಿಯಾಗಿ ಚರ್ಚಿಸಿ ಯೋಚನೆ ಮಾಡಬೇಕು. ಖಾಸಗಿ ಶಾಲೆಗಳಿಗೆ ಶಿಕ್ಷಕರ ಮತ್ತು ಸಿಬ್ಬಂದಿಗಳ ವೇತನ, ನಿರ್ವಹಣಾ ವೆಚ್ಚ ಇದೆ ಎಂಬುದು ನಮಗೂ ಅರ್ಥವಾಗುತ್ತದೆ. ಇದುವರೆಗೂ ಕೋವಿಡ್-19 ರೋಗದ ಬಗ್ಗೆ ನಿಖರವಾದ ಅಧ್ಯಯನ, ಮಾಹಿತಿ ಮತ್ತು ಅಂಕಿ ಅಂಶಗಳು ಲಭ್ಯವಿಲ್ಲಾ. ಆದ್ದರಿಂದ ಮಕ್ಕಳ ಜೀವದ ಜೊತೆ ಚೆಲ್ಲಾಟವಾಡುವುದು ಸೂಕ್ತವೇ ಎಂಬುದನ್ನು ಆಲೋಚನೆ ಮಾಡಬೇಕು ಎಂದು ಪಾಲಕರು ಮತ್ತು ಸಮಾಜ ಸೇವಕರು ಅಗಿರುವ ಸುನೀಲ್ ಸಾಲ್ಯಾನ್ ಕಡೆಕಾರ್ ಸರಕಾರದ ನಿರ್ದಾರವನ್ನು ಮರುಪರೀಶಿಲಿಸುವಂತೆ ಅಗ್ರಹಿಸಿದ್ದಾರೆ. |