ಗಂಗಾನದಿಯಲ್ಲಿ ಮಿಂದರೆ ಬಡತನ ದೂರ ಆಗುತ್ತದೆಯಾ ಖರ್ಗೆ ಹೇಳಿಕೆ- ಹಿಂದೂ ದ್ವೇಷ ಅನಾವರಣವಾಗಿದೆ: ಅಜಿತ್ ಕುಮಾರ್
ಉಡುಪಿ: ಗಂಗಾನದಿಯಲ್ಲಿ ಮಿಂದರೆ ಬಡತನ ದೂರ ಆಗುತ್ತದೆಯಾ ಎಂಬ ಹೇಳಿಕೆ ಕೊಟ್ಟ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮನಸ್ಥಿತಿ ಅವರ ಹಿಂದೂ ದ್ವೇಷವನ್ನು ಅನಾವರಣ ಮಾಡಿದೆ ಎಂದು ಉಡುಪಿ ಜಿಲ್ಲಾ ಹಿಂದೂ ಯುವಸೇನೆ ಅಧ್ಯಕ್ಷ ಅಜಿತ್ ಕುಮಾರ್ ಕೊಡವೂರು ಟೀಕಿಸಿದ್ದಾರೆ.
ಇದೇ ಮಾತನ್ನು ಮಾನ್ಯ ಖರ್ಗೆ ಯವರು ತಮ್ಮ ಮತ ಬ್ಯಾಂಕ್ ಸಬ್ಸಿಡಿ ಪಡೆದು ಹಜ್ ಯಾತ್ರೆಗೆ ಹೋಗುವಾಗ ಹೇಳಲು ಸಿದ್ದರಿದ್ದಾರೆಯೇ ಎಂದು ತೀಕ್ಶ್ಣ ವಾಗಿ ಪ್ರಶ್ನಿಸಿದರು. ಹಿಂದೂಗಳ ನಂಬಿಕೆ, ಧಾರ್ಮಿಕ ಆಚರಣೆಯನ್ನು ಲೇವಡಿ ಮಾಡುವ ಮೂಲಕ ಈ ದೇಶದ ಸಂವಿಧಾನ ಕೊಟ್ಟಿರುವ ಧಾರ್ಮಿಕ ಆಚರಣೆಯ ಹಕ್ಕನ್ನೇ ಲೇವಡಿ ಮಾಡಿರುವ ಖರ್ಗೆಯವರು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಬಗ್ಗೆ ಮಾತಾಡುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ ಎಂದು ನುಡಿದರು.