ಫೆ.1: ಈಶ್ವರ ಮಲ್ಪೆ ಪುತ್ರ ದಿ.ನಿರಂಜನ್ ಸವಿನೆನಪಿನ 2ನೇ ವರ್ಷದ ಕಾರ್ಯಕ್ರಮ
ಮಲ್ಪೆ ಜ.26(ಉಡುಪಿ ಟೈಮ್ಸ್ ವರದಿ): ಟೀಮ್ ಈಶ್ವರ್ ಮಲ್ಪೆ ಇದರ ವತಿಯಿಂದ ಆಪದ್ಬಾಂಧವ ಈಶ್ವರ ಮಲ್ಪೆ ಅವರ ಮಗ ದಿವಂಗತ ನಿರಂಜನ್ ಅವರ ಸವಿನೆನಪಿನ 2ನೇವರ್ಷದ ಕಾರ್ಯಕ್ರಮವನ್ನು ಫೆ.1ರಂದು ಸಂಜೆ 5:00 ಗಂಟೆಗೆ ಮಲ್ಪೆ ಬೀಚಿನಲ್ಲಿ ಆಯೋಜಿಸಲಾಗಿದೆ.
ಸಭಾ ಕಾರ್ಯಕ್ರಮವನ್ನು ಉಡುಪಿ ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾ ಕುಮಾರಿ ಅವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಶ್ರೀಕ್ಷೇತ್ರ ಕೆಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಅವರು ಆಶೀರ್ವಚನ ನೀಡಲಿದ್ದಾರೆ. ಹಾಗೂ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ, ಮತ್ಸ್ಯೊದ್ಯಮಿ ಆನಂದ್ ಸಿ ಕುಂದರ್, ಸಮಾಜ ಸೇವಕ ಕೃಷ್ಣಮೂರ್ತಿ ಆಚಾರ್ಯ, ಕರಾವಳಿ ಕಾವಲು ಪಡೆಯ ಪೊಲೀಸ್ ಅಧೀಕ್ಷಕ ಮಿಥುನ್ ಎಚ್.ಎಂ, ಮಲ್ಪೆ ಪೊಲೀಸ್ ಠಾಣೆಯ ಠಾಣಾಧಿಕಾರಿ ರವಿ ಬಿ.ಕೆ, ಉಡುಪಿ ಜಿಲ್ಲಾ ಯುವ ವೇದಿಕೆ ಅಧ್ಯಕ್ಷ ಹಾಗೂ ವಕೀಲರಾದ ಪ್ರವೀಣ್ ಎಂ ಪೂಜಾರಿ, ಕರ್ನಾಟಕ ಮಾನವ ಹಕ್ಕುಗಳ ಜನಜಾಗೃತಿ ಸಮಿತಿ ಬೆಂಗಳೂರು ಇದರ ರಾಜ್ಯಾಧ್ಯಕ್ಷ ಜ್ಞಾನ ಪ್ರಕಾಶ್, ಟೀಂ ಈಶ್ವರ್ ಮಲ್ಪೆ ಇದರ ಗೌರವಾಧ್ಯಕ್ಷ ಶಿವರಾಜ್, ವಡಬಾಂಡೇಶ್ವರ ವಾರ್ಡ್‌ನ ನಗರಸಭಾ ಸದಸ್ಯ ಯೋಗೀಶ್ ಸಾಲ್ಯಾನ್, ಕೊಳ ವಾರ್ಡ್‌ನ ನಗರಸಭಾ ಸದಸ್ಯರಾದ ಲಕ್ಷ್ಮಿ ಮಂಜುನಾಥ್, ಜ್ಞಾನಜ್ಯೋತಿ ಭಜನಾ ಮಂಡಳಿ ಮಲ್ಪೆ ಇದರ ಗೌರವಾಧ್ಯಕ್ಷ ಪಾಂಡುರಂಗ ಮಲ್ಪೆ, ಸ್ಪೋರ್ಟ್ಸ್ ಪ್ರಿಂಟ್ ಬೆಂಗಳೂರು ಇದರ ಮ್ಯಾನೇಜಿಂಗ್ ಡೈರೆಕ್ಟರ್ ಸತೀಶ್ ಕೋಟಾರಿ, ಉಡುಪಿ ಜಿಲ್ಲಾ ಮಹಿಳಾ ಮೋರ್ಚಾದ ವೀಣಾ ಶೆಟ್ಟಿ ಇವರು ಉಪಸ್ಥಿತರಿರಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.