ಉದ್ಯಾವರ: ಜ.26 (ನಾಳೆ) “ಗೃಹಲಕ್ಷ್ಮೀ ಫರ್ನಿಚರ್ ಮಾರ್ಟ್” ಉದ್ಘಾಟನೆ
ಉಡುಪಿ, ಜ.25(ಉಡುಪಿ ಟೈಮ್ಸ್ ವರದಿ) ಉದ್ಯಾವರ ಬಲೈಪಾದೆಯಲ್ಲಿ ನೂತನವಾಗಿ “ಗೃಹಲಕ್ಷ್ಮೀ ಫರ್ನಿಚರ್ ಮಾರ್ಟ್“ನ ಉದ್ಘಾಟನಾ ಸಮಾರಂಭ ಜ.26(ನಾಳೆ) ರಂದು ನಡೆಯಲಿದೆ.
ಉದ್ಯಾವರದ ಬಲೈಪಾದೆಯ ಕಲ್ಪರಮೇಶ ಸಂಕೀರ್ಣದಲ್ಲಿ ಬೃಹತ್ ಶೋರೂಮ್ ಅನ್ನು ನಾಳೆ ಬೆಳಿಗ್ಗೆ 9.45ಕ್ಕೆ ಓಪುಲಾ ಸಾಫ್ಟ್‌ವೇರ್ ಕಂಪೆನಿಯ ಸಿಇಓ ಸುಭಾಷ್ ಸಾಲಿಯಾನ್ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಉದ್ಯಾವರ ಸೈಂಟ್ ಕ್ಸೇವಿಯರ್ ಚರ್ಚ್ನ ಪ್ರಧಾನ ಧರ್ಮಗುರುಗಳಾದ ರೆ. ಫಾ.ಅನಿಲ್ ಡಿಸೋಜಾ, ಸಹಾಯಕ ಧರ್ಮಗುರು ಫಾ.ಸ್ಟೀಫನ್ ರೋಡಿಗ್ರಾಸ್, ತೊಟ್ಟಂ ಚರ್ಚ್ ಪ್ರಧಾನ ಧರ್ಮಗುರು ರೆ.ಫಾ.ಡೆನ್ನಿಸ್ ಡೇಸಾ, ಕೆನಡಾದ ಧರ್ಮಗುರು ಫಾ.ಆ್ಯಂಡ್ರಿ ಲೂವಿಸ್ ಭಾಗವಹಿಸಲಿದ್ದಾರೆ.
ಸುಮಾರು 3 ಸಾವಿರ ಚ.ಅ. ಬೃಹತ್ ಶೋರೂಮ್‌ನಲ್ಲಿ ಮನೆ, ಕಚೇರಿಗಳಿಗೆ ಬೇಕಾಗುವ ಉತ್ತಮ ದರ್ಜೆಯ ಪೀಠೋಪಕರಣ ಲಭ್ಯವಿದೆ. ಉದ್ಘಾಟನಾ ಸಮಾರಂಭದ ಅಂಗವಾಗಿ ವಿಶೇಷ ಕೊಡುಗೆಯಾಗಿ 98 ಸಾವಿರ ರೂ. ಮೌಲ್ಯದ 3+1+1 ಸೋಫಾ ಸೆಟ್, 6 ಕುರ್ಚಿಯ ಸಹಿತ ಡೈನಿಂಗ್ ಟೇಬಲ್ ಕೇವಲ 70 ಸಾವಿರ ರೂ. ಲಭ್ಯವಿದೆ. ಅದೇ ರೀತಿ 1.60 ಲಕ್ಷ ಮೌಲ್ಯದ ಒನ್ ಬಿಎಚ್‌ಕೆ ಮನೆಗೆ ಬೇಕಾದ ಫರ್ನಿಚರ್ ಸೆಟ್ ಕೇವಲ 1.25ಲಕ್ಷ ರೂ. ನೀಡಲಾಗುವುದು. ಇದೇ ರೀತಿ ಎಲ್ಲಾ ಬಗೆಯ ಉತ್ಕೃಷ್ಟ ಗುಣಮಟ್ಟದ ವಾರ್ಡ್‌ರೋಬ್, ಮಾಡರ್ನ್ ಕಿಚನ್ ಇಂಟೀರಿಯರ್ ಸಹಿತ ಎಲ್ಲಾ ಬಗೆಯ ಫರ್ನಿಚರ್ ಲಭ್ಯವಿದೆ ಎಂದು ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 7975946337