ಮಾಸ್ಕ್ ಧರಿಸದೇ ಓಡಾಡೋರಿಗೆ ಬಿಗ್ ಶಾಕ್!
ದೆಹಲಿ: ಕೊರೋನಾ ಸೋಂಕಿನ ಹೆಚ್ಚಳದ ಹಿನ್ನಲೆಯಲ್ಲಿ ವಿವಾಹಕ್ಕೆ 200 ಜನರಿಗೆ ಇದ್ದಂತ ಮಿತಿಯನ್ನು 50 ಜನರಿಗೆ ಇಳಿಸಿ ಶಾಕ್ ನೀಡದ್ದ ದೆಹಲಿ ಸರಕಾರ ಇದೀಗ ಜನತೆಗೆ ಮತ್ತೊಂದು ಶಾಕ್ ನೀಡಿದೆ. ಇದೀಗ ರಾಷ್ಟ್ರ ರಾಜಧಾನಿಯಲ್ಲಿ ಮಾಸ್ಕ್ ಧರಿಸದೆ ಓಡಾಡೋರಿಗೆ ರೂ.500ರ ದಂಡವನ್ನು ರೂ.2000ಕ್ಕೆ ಹೆಚ್ಚಳ ಮಾಡಿ ಬಿಗ್ ಶಾಕ್ ನೀಡಿದೆ ಸರಕಾರ.
ಈ ಕುರಿತಂತೆ ಇಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನೇತೃತ್ವದಲ್ಲಿ ರಾಜಧಾನಿಯಲ್ಲಿ ನಡೆದ ಕೋವಿಡ್-19 ಪರಿಸ್ಥಿತಿ ನಿಭಾಯಿಸುವ ಕುರಿತ ಸರ್ವ ಪಕ್ಷಗಳ ಸಭೆ ಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಈ ಸಭೆಯಲ್ಲಿ ಈ ಮೊದಲು ಮಾಸ್ಕ್ ಧರಿಸದೇ ಓಡಾಡೋರಿಗೆ ಹಾಕಲಾಗುತ್ತಿದ್ದಂತ 500 ರೂಪಾಯಿ ದಂಡವನ್ನು 2000ಕ್ಕೆ ಹೆಚ್ಚಳ ಮಾಡುವಂತ ತೀರ್ಮಾನವನ್ನು ಕೈಗೊಂಡಿರುವುದಾಗಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ತಿಳಿಸಿದರು.