ಉಡುಪಿ: ಅಪರಿಚಿತನಿಂದ ಐದು ವರ್ಷದ ಮಗುವಿಗೆ ಲೈಂಗಿಕ ಕಿರುಕುಳ
ಉಡುಪಿ,ಜ.24(ಉಡುಪಿ ಟೈಮ್ಸ್ ವರದಿ) ಅಪರಿಚಿತನೋರ್ವ ಐದು ವರ್ಷದ ಮಗುವನ್ನು ಪುಸಲಾಯಿಸಿ ನಿರ್ಜನ ಪ್ರದೇಶದಲ್ಲಿ ಲೈಂಗಿಕ ಕಿರುಕುಳ ನೀಡಿದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.
ನಗರ ಪೂರ್ಣಪ್ರಜ್ಞ ಆಡಿಟೋರಿಯಂ ಎದುರಿನ ಓಣಿಯಲ್ಲಿ ನಿನ್ನೆ ಮಧ್ಯಾಹ್ನ ನಾಲ್ಕು ಗಂಟೆಗೆ ಸುಮಾರು ಮೂವತ್ತು ವರ್ಷದ ಅಪರಿಚಿತ ಐದು ವರ್ಷದ ಹೆಣ್ಣು ಮಗುವಿಗೆ ಚಾಕಲೇಟ್ ನೀಡಿ ಅಲ್ಲೇ ಹತ್ತಿರದ ಪೊದೆಗೆ ಕರೆದುಕೊಂಡು ಹೋಗಿ ಕಿರುಕುಳ ನೀಡಲು ಯತ್ನಿಸಿದ್ದ ಎನ್ನಲಾಗಿದೆ.
ದೂರದಲ್ಲಿ ನೋಡಿದ ಸ್ಥಳೀಯರು ಆತನನ್ನು ಬೆನ್ನಟ್ಟಿದರು. ತಕ್ಷಣ ಅಪರಿಚಿತ ಯುವಕ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಬಗ್ಗೆ ಮಹಿಳಾ ಠಾಣೆಯಲ್ಲಿ ಮಗುವಿನ ಫೋಷಕರು ದೂರು ದಾಖಲಿಸಿದ್ದಾರೆ.