ಮಂಗಳೂರು: ಅನೈತಿಕ ಚಟುವಟಿಕೆ ಆರೋಪ- ಮಸಾಜ್ ಸೆಂಟರ್‌ಗೆ ರಾಮ ಸೇನೆ ದಾಳಿ
ಮಂಗಳೂರು: ಅನೈತಿಕ ಚಟುವಟಿಕೆ ಇದೆ ಎಂದು ಆರೋಪಿಸಿ ಮಸಾಜ್ ಸೆಂಟರೊಂದಕ್ಕೆ ದಾಳಿ ಮಾಡಿದ ರಾಮ್ ಸೇನಾ ಕರ್ನಾಟಕದ ಕಾರ್ಯಕರ್ತರು ದಾಂಧಲೆ ನಡೆಸಿರುವ ಘಟನೆ ಬಿಜೈ ನಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ನಾಲ್ಕು ಯುವತಿಯರು ಮತ್ತು ಓರ್ವ ಪುರುಷ ಬಿಜೈ ಕೆಎಸ್ ಆರ್ ಟಿಸಿ ಬಳಿಯ ಕಲರ್ಸ್ ಯೂನಿಸೆಕ್ಸ್ ಸೆಲೂನಿನ ಮಸಾಜ್ ಪಾರ್ಲರ್ ನಲ್ಲಿದ್ದರು ಎನ್ನಲಾಗಿದ್ದು, ಈ ವೇಳೆ ಏಕಾಏಕಿ ನುಗ್ಗಿದ ಹತ್ತು ಮಂದಿ ರಾಮ ಸೇನೆಯ ಕಾರ್ಯಕರ್ತರ ತಂಡ ಪುರುಷನಿಗೆ ಹಲ್ಲೆ ನಡೆಸಿದೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಬರ್ಕೆ ಪೊಲೀಸರ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಮಸಾಜ್ ಸೆಂಟರ್ ದಾಳಿಗೂ ಶ್ರೀರಾಮಸೇನೆಗೂ ಸಂಭಂದವಿಲ್ಲ- ಜಯರಾಮ ಅಂಬೆಕಲ್ಲು.
ಮಂಗಳೂರು ನಲ್ಲಿ ನಡೆದ ಮಸಾಜ್ ಸೆಂಟರ್ ದಾಳಿಗೂ ಶ್ರೀರಾಮಸೇನೆ ಗೂ ಸಂಭಂದವಿಲ್ಲ ಎಂದು ಶ್ರೀರಾಮಸೇನೆ ಮಂಗಳೂರು ವಿಭಾಗ ಅಧ್ಯಕ್ಷ ಜಯರಾಮ ಅಂಬೆಕಲ್ಲು ಸ್ಪಷ್ಟ ಪಡಿಸಿದ್ದಾರೆ.
ಇಂದು ಪ್ರಮೋದ್ ಮುತಾಲಿಕರ 70 ನೇ ವರ್ಷದ ಜನ್ಮ ದಿನಾಚರಣೆ ಪ್ರಯುಕ್ತ ಎಲ್ಲಾ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಪೂಜೆ ಹವನ ಹಾಗೂ ಇನ್ನಿತರ ಕಾರ್ಯಕ್ರಮ ನಡೆಸುತ್ತಿದ್ದಾರೆ. ಹೆಚ್ಚಿನ ಪದಾಧಿಕಾರಿಗಳು ಅಯೋಧ್ಯೆ ಹಾಗೂ ಕುಂಭ ಮೇಳ ಪ್ರವಾಸದಲ್ಲಿದ್ದಾರೆಂದು ವಿಭಾಗ ಅಧ್ಯಕ್ಷರು ಸ್ಪಷ್ಟ ಪಡಿಸಿದ್ದಾರೆ.