ಮದ್ಯ ಪ್ರಿಯರಿಗೆ ಮತ್ತೆ ಶಾಕ್ ನೀಡಿದ ರಾಜ್ಯ ಸರ್ಕಾರ: ಬಿಯರ್ ಬೆಲೆಯಲ್ಲಿ ಭಾರಿ ಏರಿಕೆ!

ಬೆಂಗಳೂರು: ರಾಜ್ಯದಲ್ಲಿ ಬಿಯರ್ ಬೆಲೆಗಳನ್ನು ಪರಿಷ್ಕರಿಸಲಾಗಿದೆ. ಸೋಮವಾರದಿಂದಲೇ ಪರಿಷ್ಕೃತ ಬೆಲೆಗಳು ಸೋಮವಾರದಿಂದ ಜಾರಿಗೆ ಬಂದಿವೆ. ಬಿಯರ್ ಮೇಲಿನ ಸುಂಕ ಹೆಚ್ಚಳದ ಕುರಿತು ರಾಜ್ಯ ಸರ್ಕಾರ ಆ.23, 2024 ರಂದು ಕರಡು ಅಧಿಸೂಚನೆ ಹೊರಡಿಸಿತು. ಈ ಕುರಿತ ಅಂತಿಮ ಅಧಿಸೂಚನೆಯ ನ್ನು ಜ.8 ರಂದು ಹೊರಡಿಸಲಾಗಿತ್ತು.

ಇನ್ನು ಮುಂದೆ ಬಿಯರ್ ಬೆಲೆಗಳು ಆಲ್ಕೋಹಾಲ್ ಅಂಶವನ್ನು ಅವಲಂಬಿಸಿರುತ್ತದೆ. ಆಲ್ಕೋಹಾಲ್ ಅಂಶವನ್ನು ಅವಲಂಬಿಸಿ ಇದನ್ನು 2 ಸ್ಲ್ಯಾಬ್‌ಗಳಾಗಿ ವರ್ಗೀಕರಿಸಲಾಗಿದೆ. ಅಲ್ಕೋಹಾಲ್ ಅಂಶ ಶೇ.5ಕ್ಕಿಂತ ಕಡಿಮೆ ಇರುವ ಅಥವಾ ಅದಕ್ಕೆ ಸಮಾನವಾಗಿರುವ ಮೈಲ್ಡ್ ಬಿಯರ್ ಬೆಲೆಯನ್ನು ಪ್ರತಿ ಬಲ್ಕ್ ಲೀಟರ್‌ಗೆ 12 ರೂ ಮತ್ತು ಶೇ 5-8 ರಷ್ಟು ಆಲ್ಕೋಹಾಲ್ ಹೊಂದಿರುವ ಸ್ಟ್ರಾಂಗ್ ಬಿಯರ್‌ಗಳಿಗೆ ರೂ.20 ಎಂದು ನಿಗದಿಪಡಿಸಲಾಗಿದೆ.

ಈ ಹಿಂದೆ ಆಲ್ಕೋಹಾಲ್ ಅಂಶವನ್ನು ಲೆಕ್ಕಿಸದೆ ಎಲ್ಲಾ ಬಿಯರ್ ಮೇಲಿನ ಅಬಕಾರಿ ಸುಂಕ ರೂ. 10 pbl ಆಗಿತ್ತು. ಎಲ್ಲಾ ಸ್ಟ್ರಾಂಗ್ ಬಿಯರ್‌ಗಳ ಕನಿಷ್ಠ ಬೆಲೆ ರೂ. 145 ರೂ.ಗಿಂತ ಕಡಿಮೆ ಇರುವುದಿಲ್ಲ. ರೂ. 100 ಗೆ ಸಿಗುತ್ತಿದ್ದ Legend beer ಬೆಲೆ ಈಗ ರೂ.145 ಆಗಿದೆ

ಸಕ್ಕರೆ ಬಳಕೆ ಅಥವಾ ಬಳಸದೆ ಮಾಲ್ಟ್ ಅಥವಾ ಧಾನ್ಯದಿಂದ ಹುದುಗಿಸಿದ ಮದ್ಯವನ್ನು ತಯಾರಿಸ ಬೇಕು. ಸಕ್ಕರೆ ಪ್ರಮಾಣ ಶೇ.25ಕ್ಕಿಂತ ಹೆಚ್ಚಿರಬಾರದು ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದು ಬ್ರೂವರೀಸ್‌ಗಳಿಗೆ ಸರ್ಕಾರ ಸೂಚನೆ ನೀಡಿದೆ. ಇನ್ನು ಮುಂದೆ ಎಲ್ಲಾ ಬ್ರೂವರೀಸ್‌ಗಳು ಬಿಯರ್‌ ತಯಾರಿಕೆಗೆ ಬಳಸುವ ಅಂಶಗಳನ್ನು ಕಡ್ಡಾಯವಾಗಿ ಘೋಷಿಸಬೇಕಾಗುತ್ತದೆ.

ಸಕ್ಕರೆ ಅಂಶ ಶೂನ್ಯವಾಗಿರಬಹುದು ಆದರೆ ಶೇ.25ಕ್ಕಿಂತ ಹೆಚ್ಚು ಇರಬಾರದು. ಹೊಸ ದರಗಳು ಸೋಮವಾರದಿಂದ ಜಾರಿಗೆ ಬಂದಿವೆ. ಹೊಸ ಲೇಬಲ್‌ಗಳಿಗಾಗಿ ಬ್ರೂವರೀಸ್‌ಗಳಿಗೆ ಅಬಕಾರಿ ಇಲಾಖೆ ಫೆಬ್ರವರಿ 1 ರವರೆಗೆ ಸಮಯ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಯುವಕರು ಸಾಮಾನ್ಯವಾಗಿ ಬಿಯರ್‌ನಿಂದ ಪ್ರಾರಂಭವಾಗುವ ಮದ್ಯಪಾನಕ್ಕೆ ಧುಮುಕುವುದನ್ನು ನಿರ್ಬಂಧಿಸುವುದು ದರ ಏರಿಕೆಗೆ ಪ್ರಮುಖ ಕಾರಣವಾಗಿದೆ. ರಾಜ್ಯದಲ್ಲಿ ಒಟ್ಟು ಬಿಯರ್ ಮಾರಾಟದಲ್ಲಿ ಸ್ಟ್ರಾಂಗ್ ಬಿಯರ್ ಗಳು ಶೇ.75 ರಷ್ಟು ಮಾರಾಟವಾಗುತ್ತಿವೆ. ಅವುಗಳಲ್ಲಿ ಕೆಲವು ಮಾಲ್ಟ್ ಬದಲಿಗೆ ಹೆಚ್ಚಿನ ಸಕ್ಕರೆ ಅಂಶ ಹೊಂದಿದ್ದು, ಇದು ಆರೋಗ್ಯಕ್ಕೆ ಹಾನಿಕಾರಕವಾಗಿದೆ ಎಂದು ಮೂಲಗಳು ತಿಳಿಸಿವೆ. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಜುಲೈ 2023 ರಂದು ಅಧಿಕಾರಕ್ಕೆ ಬಂದ ನಂತರ ಮೂರನೇ ಬಾರಿಗೆ ಮದ್ಯ ದರವನ್ನು ಏರಿಕೆ ಮಾಡಿದೆ.

Leave a Reply

Your email address will not be published. Required fields are marked *

error: Content is protected !!