ಬ್ರಹ್ಮಾವರ: ಹೂಡಿಕೆ ಹೆಸರಿನಲ್ಲಿ ಮಹಿಳೆಗೆ 12.78ಲಕ್ಷ ರೂ. ಆನ್‌ಲೈನ್ ವಂಚನೆ
ಬ್ರಹ್ಮಾವರ, ಜ.20: ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ ಮಹಿಳೆಯೊಬ್ಬರಿಗೆ ಆನ್‌ಲೈನ್ ಮೂಲಕ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾರಕೂರಿನ ದೀಪಶ್ರೀ(32) ಎಂಬವರನ್ನು ಆರೋಪಿಗಳು ಟೆಲಿಗ್ರಾಂ ಆ್ಯಪ್ ಮೂಲಕ ಸಂಪರ್ಕಿಸಿ, ಹಣ ಹೂಡಿಕೆ ಹಾಗೂ ಹೆಚ್ಚಿನ ಲಾಭಾಂಶ ನೀಡುವ ಬಗ್ಗೆ ನಂಬಿಸಿದ್ದು, ಅದರಂತೆ ದೀಪಾಶ್ರೀ ಹಾಗೂ ಅವರ ತಂಗಿಯ ಖಾತೆಯಿಂದ ಹಂತ ಹಂತ ವಾಗಿ ಜ.13ರಿಂದ ಜ.18ರ ಮಧ್ಯಾವಧಿಯಲ್ಲಿ ಒಟ್ಟು 12,78,640ರೂ. ಹಣವನ್ನು ಆರೋಪಿತರ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದರು. ನಂತರ ಯಾವುದೇ ಲಾಭಾಂಶ ನೀಡದೇ ಹಣವನ್ನು ಹಿಂತಿರುಗಿಸದೇ ಮೋಸ ಮಾಡಿರುವುದಾಗಿ ದೂರಲಾಗಿದೆ.