ಕೆಮ್ಮಣ್ಣು ಗಣಪತಿ ಸ.ವ್ಯ .ಸಂಘ: ಸತತ ಐದನೇ ಬಾರಿಗೆ ಟಿ.ಸತೀಶ್ ಶೆಟ್ಟಿ ಅಧ್ಯಕ್ಷರಾಗಿ ಆಯ್ಕೆ
ಉಡುಪಿ: ಕೆಮ್ಮಣ್ಣು ಗಣಪತಿ ಸಹಕಾರಿ ವ್ಯವಸಾಯಕ ಸಂಘದ ಮುಂದಿನ 5 ವರ್ಷದ ಅವಧಿಗೆ ಅಧ್ಯಕ್ಷರಾಗಿ ಟಿ.ಸತೀಶ್ ಶೆಟ್ಟಿ ಹಾಗೂ ಉಪಾಧ್ಯಕ್ಷರಾಗಿ ಅಫ್ಜಲ್ ಸಾಹೇಬ್ ಬಿ. ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಟಿ.ಸತೀಶ್ ಶೆಟ್ಟಿ ಅವರು ಸತತ 5ನೇ ಬಾರಿಗೆ ಆಯ್ಕೆಯಾಗಿದ್ದು, ಪ್ರಥಮ ಅವಧಿಯಲ್ಲಿ ಸಂಘದ ಠೇವಣಿಯನ್ನು 9 ಕೋಟಿಯಿಂದ ಶತಮಾನೋತ್ಸವ ಆಚರಣೆಯ ಸಂದರ್ಭ (2024) ದಲ್ಲಿ 118 ಕೋಟಿ ಹೆಚ್ಚಿಸಿ ಸಂಘದ ಸರ್ವಾಂಗಿಣ ಪ್ರಗತಿಗೆ ಕಾರಣಕರ್ತರಾಗಿದ್ದಾರೆ.
2024ರಲ್ಲಿ ಸಂಘ ಶತಮಾನೋತ್ಸವ ಆಚರಿಸಿದ್ದು, ಶತಾಭಿವಂದನಂ ಕಾರ್ಯಕ್ರಮದಲ್ಲಿ ನಿವೃತ್ತ ಲೋಕಾಯುಕ್ತ ಎನ್. ಸಂತೋಷ್ ಹೆಗ್ಡೆ, ಉದ್ಯಮಿ ತೋನ್ಸೆ ಅಶೋಕ್ ಪೈ, ದ.ಕ. ಜಿಲ್ಲಾ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಕೆ. ರಾಜೇಂದ್ರ ಕುಮಾರ್ ಹಾಗೂ ಗಣ್ಯರು, ಸಾರ್ವಜನಿಕರು ಭಾಗವಹಿಸಿದ್ದು, ಸಮಾಜಮುಖಿ ಯೋಜನೆಗಳು ಸಾರ್ವತ್ರಿಕ ಪ್ರಶಂಸೆಗೆ ಪಾತ್ರವಾಗಿದೆ. ಉಮೇಶ್ ಅಮೀನ್, ಪುರುಷೋತ್ತಮ ಸಾಲ್ಯಾನ್, ಶ್ಯಾಮ್ ಎನ್, ರಾಘವೇಂದ್ರ ಪ್ರಸಾದ್. ಟಿ. ಗೋಪಾಲ ಕೃಷ್ಣ, ಹರೀಶ್ ಶೆಟ್ಟಿ, ಅನೀಶ್, ಲೇನಿ ಫೆರ್ನಾಂಡಿಸ್, ಲತಾ ಪಿ.ರಾವ್, ಲಕ್ಷ್ಮೀ, ವೆರೋನಿಕಾ ಕರ್ನೆಲಿಯೋ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.