ಉಪ್ಪೂರು: ರೈಸ್ ಮಿಲ್‌ಗೆ ದಾಳಿ- 18.18 ಕ್ವಿಂಟಾಲ್ ಅಕ್ರಮ ಪಡಿತರ ಅಕ್ಕಿ ವಶ
ಬ್ರಹ್ಮಾವರ, ಜ.17: ರೈಸ್ ಮಿಲ್‌ನಲ್ಲಿ ಅಕ್ರಮವಾಗಿ ದಾಸ್ತಾನು ಇರಿಸಿದ್ದ ಪಡಿತರ ಅಕ್ಕಿಯನ್ನು ವಶಪಡಿಸಿ ಕೊಂಡ ಘಟನೆ ಉಪ್ಪೂರಿನಲ್ಲಿ ಜ.16ರಂದು ನಡೆದಿದೆ.
ಉಪ್ಪೂರು ಗ್ರಾಮದ ಶ್ರೀಗಣೇಶ್ ರೈಸ್ ಮಿಲ್ಲಿನಲ್ಲಿ ಪಡಿತರ ಅಕ್ಕಿಯನ್ನು ಕಾನೂನು ಬಾಹಿರವಾಗಿ ಸಂಗ್ರಹಿಸಿಟ್ಟಿರುವ ಬಗ್ಗೆ ಮಾಹಿತಿಯ ಮೇರೆಗೆ ಉಡುಪಿಯ ಆಹಾರ ನಿರೀಕ್ಷಕ ಪ್ರವೇಶ್ ಕುಮಾರ್ ದಾಳಿ ಮಾಡಿದ್ದು, ಅಲ್ಲಿ 62 ಚೀಲಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 18.18 ಕ್ವಿಂಟಾಲ್ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ.