ಮಣಿಪಾಲ: ಮಹಡಿಯ ದಂಡೆಯಿಂದ ಬಿದ್ದು ವಿದ್ಯಾರ್ಥಿ ಮೃತ್ಯು
ಮಣಿಪಾಲ, ಜ.17: ಮನೆಯ ಮೇಲ್ಗಡೆಯ ದಂಡೆಯಲ್ಲಿ ಹಾಡು ಕೇಳುತ್ತ ಕುಳಿತ್ತಿದ್ದ ವಿದ್ಯಾರ್ಥಿ ಆಕಸ್ಮಿಕವಾಗಿ ಕಾಲು ಜಾರಿ ಕೆಳಗೆ ಬಿದ್ದು ಮೃತಪಟ್ಟ ಘಟನೆ ಬಡಗುಬೆಟ್ಟು ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಬಡಗುಬೆಟ್ಟು ಗ್ರಾಮದ ಕಾರ್ತಿಕ್(21) ಎಂದು ಗುರುತಿಸಲಾಗಿದೆ. ಮಣಿಪಾಲದ ಡಿಪಾರ್ಟ್‌ಮೆಂಟ್ ಆಫ್ ಕಾಮರ್ಸ್‌ನಲ್ಲಿ ಮೂರನೇ ವರ್ಷದ ಬಿಕಾಂ ವ್ಯಾಸಾಂಗ ಮಾಡುತ್ತಿದ್ದ ಇವರು, ಜ.12ರಂದು ಮನೆಯಲ್ಲಿ ಊಟ ಮುಗಿಸಿ ಮಹಡಿಗೆ ಹೋಗಿ ಮನೆಯ ಮೇಲ್ಗಡೆಯ ದಂಡೆಯಲ್ಲಿ ಕುಳಿತು ಮೊಬೈಲ್‌ನಲ್ಲಿ ಹಾಡು ಕೇಳುತ್ತಿದ್ದರು.