ಕೆನರಾ ಬ್ಯಾಂಕ್‌ನ ನಿವೃತ್ತ ಉದ್ಯೋಗಿ ತುಳಸೀ ದಾಸ್ ರಾಮಕೃಷ್ಣ ಕಿಣಿ ನಿಧನ
ಮಣಿಪಾಲ: ಕೆನರಾ ಬ್ಯಾಂಕಿನ ನಿವೃತ್ತ ಉದ್ಯೋಗಿ ಕೆ. ತುಳಸೀದಾಸ್ ರಾಮಕೃಷ್ಣ ಕಿಣಿ(89) ತಮ್ಮ ಸ್ವಗ್ರಹದಲ್ಲಿ ಇಂದು ಮುಂಜಾನೆ ನಿಧನರಾದರು.
ಮೃತರು ಪತ್ನಿ, ಓರ್ವ ಪುತ್ರ, ನಾಲ್ವರು ಪುತ್ರಿಯರನ್ನು ಆಗಲಿದ್ದಾರೆ. ಇವರು ಶ್ರೀವೆಂಕಟರಮಣ ದೇವಸ್ಥಾನ ಕಲ್ಯಾಣಪುರದ ಭಜನಾ ಸಪ್ತಾಹದ ಸಮಿತಿಯ ಅಧ್ಯಕ್ಷರಾಗಿ ಬಹಳಷ್ಟು ವರ್ಷಗಳ ಕಾಲ ನಿರಂತರ ಸೇವೆ ನೀಡುತ್ತಾ ಬಂದಿರುತ್ತಾರೆ. ಜಿಎಸ್‌ಬಿ ಸಮಾಜದ ಕಾಶೀಮಠ, ಗೋಕರ್ಣಮಠ, ಕೈವಲ್ಯ ಮಠದ ಸ್ವಾಮೀಜಿಯವರ ಪ್ರೀತಿಪಾತ್ರರಾಗಿದ್ದರು. ಸಮಾಜ ಸೇವಕರಾಗಿ,ಕೊಡುಗೆ ದಾನಿಯಾಗಿದ್ದರು, ನೀಲಾವರ ಗೋಶಾಲೆ, ಅಯೋಧ್ಯ ರಾಮಮಂದಿರ, ಪರಿಸರದ ಇತರೆ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಧನ ಸಹಾಯ, ವಿದ್ಯಾರ್ಥಿಗಳ ವಿದ್ಯಾಭ್ಯಾಸ ಆರ್ಥಿಕ ನೆರವು, ಅನ್ಯಾರೋಗ್ಯ ಪೀಡಿತರಿಗೆ ಧನ ಸಹಾಯ, ಸಂಗೀತ ಅಭಿಮಾನಿಗಳಾದ ಇವರು ಪ್ರಸಿದ್ಧ ಕಲಾವಿದರನ್ನೂ ಕಲ್ಯಾಣಪುರ ಕರೆ ತಂದು ಕಾರ್ಯಕ್ರಮ ನೀಡುವಲ್ಲಿ ಸಹಕಾರಿಯಾಗಿದ್ದರು.
ಇವರ ನಿಧನಕ್ಕೆ ಮಾಜಿ ಸಚಿವ ಪ್ರಮೋದ್ ಮದ್ವರಾಜ್, ಮಾಜಿ ಶಾಸಕ ರಘುಪತಿ ಭಟ್, ಹರ್ಷ ಬಳಗ ಹಾಗೂ ವಿವಿಧ ಭಜನಾ ಮಂಡಳಿಯವರು ಸಂತಾಪ ಸೂಚಿಸಿದ್ದಾರೆ.