ಮಲ್ಪೆ: ಗುಂಪಿನಿಂದ ದಂಪತಿಗಳ ಮೇಲೆ ಮಾರಣಾತಿಕ ದಾಳಿ
ಉಡುಪಿ: ಮಲ್ಪೆ ಬೀಚ್‌ನಲ್ಲಿ ಕಳೆದ ರಾತ್ರಿ ಬೈಕ್ ಪಾರ್ಕಿಂಗ್ ವಿಚಾರದಲ್ಲಿ ವಾಗ್ವಾದ ನಡೆದು ದಂಪತಿಗಳ ಮೇಲೆ ತಂಡವೊಂದು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಶೇಖರ್ ತಿಂಗಳಾಯ ಮತ್ತು ಗೀತಾ ಹಲ್ಲೆಗೊಳಗಾದ ದಂಪತಿಗಳು. ಸಾಗರ್, ಚರಣ್, ಯಶವಂತ್, ಕಿಶೋರ್, ರಾಜ ಅವರು ಪಾರ್ಕಿಂಗ್ ವಿಚಾರದಲ್ಲಿ ದಂಪತಿಗಳಿಗೆ ಹಲ್ಲೆ ನಡೆಸಿದ್ದಾರೆ.
ಘಟನೆಯ ದೃಶ್ಯ ಸಿಸಿ ಕ್ಯಾಮರದಲ್ಲಿ ದಾಖಲಾಗಿದ್ದು, ಹಲ್ಲೆಗೊಳಾಗದ ದಂಪತಿಗಳು ಉಡುಪಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.