ಬ್ರಹ್ಮಾವರ: ಸಾಂತ್‌ಮಾರಿ ಹಬ್ಬಕ್ಕೆ ಹೋಗಿದ್ದ ಬಾಲಕಿಯ ಚಿನ್ನದ ಸರ ಸುಲಿಗೆ
ಬ್ರಹ್ಮಾವರ, ಜ.16: ಬ್ರಹ್ಮಾವರ ಎಸ್‌ಎಂಎಸ್ ಚರ್ಚ್‌ನ ವಾರ್ಷಿಕ ಹಬ್ಬಕ್ಕೆ ಹೋಗಿದ್ದ ಬಾಲಕಿಯ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಳ್ಳರು ಸುಲಿಗೆ ಮಾಡಿರುವ ಘಟನೆ ಜ.14ರಂದು ರಾತ್ರಿ ವೇಳೆ ನಡೆದಿದೆ.
ಉಪ್ಪಿನಕೋಟೆಯ ಅವಿಟಾ ರೋಡ್ರಿಗಸ್ ಹಾಗೂ ಅವರ ಮಗಳು ಅನ್ಸಿಯಾ ಹಬ್ಬವನ್ನು ಮುಗಿಸಿ ಮನೆಗೆ ಹೋಗಲು ಚರ್ಚ್‌ನ ಗೇಟ್‌ನ ಬಳಿ ಬರುತ್ತಿರುವಾಗ ಕಳ್ಳರು ಅನ್ಸಿಯಾಳ ಕುತ್ತಿಗೆಯಲ್ಲಿದ್ದ 8 ಗ್ರಾಂ ತೂಕದ ಚಿನ್ನದ ಸರವನ್ನು ಎಳೆದು ಕೊಂಡು ಹೋಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.