ಎಂಟು ವರ್ಷವಾದರೂ ಪೂರ್ಣವಾಗದ ಇಂದ್ರಾಳಿ ಸೇತುವೆ- ಮೋದಿ ಸರಕಾರದ ಆಡಳಿತ ವೈಫಲ್ಯದ ಕೈಗನ್ನಡಿ- ಸುರೇಶ್ ಶೆಟ್ಟಿ

ಇಂದ್ರಾಳಿ ರೈಲ್ವೆ ಮೇಲ್ ಸೇತುವೆ- ಎರಡೆರಡು ಬಾರಿ ಮಾತು ತಪ್ಪಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ…!

ಉಡುಪಿ: ಕಳೆದ ಎಂಟು ವರ್ಷಗಳಿಂದ ನೆನೆಗುದಿಗೆ ಬಿದ್ದ ಇಂದ್ರಾಳಿ ರೈಲ್ವೆ ಮೇಲ್ ಸೇತುವೆ ಕಾಮಗಾರಿ ಇನ್ನೂ ಕೂಡ ಮುಗಿಯದೆ, ಮಾತ್ರವಲ್ಲ ಇದನ್ನು ಮುಗಿಸುವಂತಹ ಇರಾದೆ ಕೇಂದ್ರದ ಬಿಜೆಪಿ ಸರಕಾರಕ್ಕೆ ಇದ್ದಂತೆ ಇಲ್ಲ.

ಉಡುಪಿಯ ಸಂಸದರು ಕಳೆದ ಸೆಪ್ಟಂಬರ್‌ನಲ್ಲಿ ಮುಗಿಸುತ್ತೇವೆ ಎಂಬ ವಾಗ್ದಾನವನ್ನು ನೀಡಿದ್ದು ನಂತರದಲ್ಲಿ ಜನವರಿ 15ರಂದು ಮುಗಿಸುವ ಭರವಸೆಯನ್ನು ಉಡುಪಿಯ ಜನತೆಗೆ ನೀಡಿದ್ದರು. ಆದರೂ ಈ ಎಲ್ಲ ಭರವಸೆಗಳು ಸುಳ್ಳಾಗಿ ಉಡುಪಿ ಸಂಸದರು ಮಾತು ತಪ್ಪಿದ್ದಾರೆ. ಇದು ಬಿಜೆಪಿಯ ಕೇಂದ್ರ ಸರಕಾರದ ಆಡಳಿತ ವೈಫಲ್ಯ ಎದ್ದು ಕಾಣುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ನಿತಿನ್ ಗಡ್ಕರಿಯವರು ಇಡೀ ದೇಶದಾದ್ಯಂತ ದಿನನಿತ್ಯ ನೂರಾರು ಕಿಲೋಮೀಟರ್ ರಸ್ತೆಗಳನ್ನು ನಿರ್ಮಿಸುತ್ತೇವೆ, ದೊಡ್ಡ ದೊಡ್ಡ ಸೇತುವೆಗಳನ್ನು ನಿರ್ಮಿಸುತ್ತೇವೆ ಎಂದು ಹೇಳಿಕೆಯನ್ನು ನೀಡುತ್ತಾ ದೇಶದ ಜನಸಾಮಾನ್ಯರನ್ನು ಮೋಸಗೊಳಿಸುತ್ತಿದ್ದಾರೆ. ನಮ್ಮ ಇಂದ್ರಾಳಿ ರೈಲ್ವೆ ಮೇಲ್ ಸೇತುವೆ ಕೇವಲ ಐವತೊಬಂತು ಮೀಟರ್ (59ಮೀ.) ಇದ್ದು ಇದನ್ನೇ ಪೂರ್ಣಗೊಳಿಸಲು ಕಳೆದ ಎಂಟು ವರ್ಷಗಳಿಂದ ಸಾಧ್ಯವಾಗಿಲ್ಲ. ಇನ್ನು ಹಾಗೆ ಉಳಿದುಕೊಂಡಿರುವಾಗ ಈ ಮೋದಿ ಸರಕಾರ ಬೇರೆಬೇರೆ ಮೇಲ್ ಸೇತುವೆ, ದೊಡ್ಡ ದೊಡ್ಡ ಸೇತುವೆಯಾಗಲಿ ಅಥವಾ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಲು ಸಾಧ್ಯವೇ ಎನ್ನುವುದು ಒಂದು ಪ್ರಶ್ನೆಯಾಗಿ ಉಳಿದಿದೆ.

ಇವರು ಅಧಿಕಾರ ಪಡೆದ ದಿನದಿಂದ ಉದ್ಘಾಟನೆ ನೆರವೇರಿಸುತ್ತಿರುವುದು ಈ ಹಿಂದಿನ ಕಾಂಗ್ರೆಸ್ ಸರಕಾರ ಮಾಡಿದ ಸೇತುವೆ ಹಾಗೂ ರಸ್ತೆಗಳನ್ನು ಮಾತ್ರ. ಕಾಂಗ್ರೆಸ್ ಸರಕಾರದ ಸಾಧನೆಯನ್ನು ತಮ್ಮದೆಂದು ತೋರಿಸಿ ಕೊಳ್ಳುತ್ತಿರುವ ಈ ಕೇಂದ್ರದ ಬಿಜೆಪಿ ನಾಯಕರಿಗೆ ನಾಚಿಕೆ ಆಗಬೇಕು. ಶ್ರೀನಿವಾಸ್ ಪೂಜಾರಿಯವರ ಸ್ಥಾನದಲ್ಲಿ ಜಯಪ್ರಕಾಶ್ ಹೆಗ್ಡೆ ಅವರು ಗೆದ್ದು ಬಂದಿದ್ದರೆ ಉಡುಪಿ ಜಿಲ್ಲೆ ಚಿತ್ರಣ ಬದಲಾಗುತ್ತಿತ್ತು. ಆದರೆ ನಮ್ಮ ರಾಜ್ಯದ ಬಿಜೆಪಿ ಸಂಸದರು ಮೋದಿಯವರ ಮುಂದೆ ಮಾತನಾಡಲು ಹೆದರುವುದರಿಂದ ನಮ್ಮ ಉಡುಪಿಯ ಪರಿಸ್ಥಿತಿ ಇಂದು ಈ ಮಟ್ಟಕ್ಕೆ ತಲುಪಿದೆ.

ಇನ್ನು ಕಲ್ಯಾಣಪುರ, ಮಲ್ಪೆ, ಅಂಬಲಪಾಡಿ, ಪರ್ಕಳ ಈ ರಾಷ್ಟ್ರೀಯಹೆದ್ದಾರಿಗಳ ಕಾಮಗಾರಿ ಬೇಗ ಮುಗಿಯಲು ಸಾಧ್ಯವೇ?. ಇದಕ್ಕೆ ನಮ್ಮ ಸಂಸದರಿಂದ ಸರಿಯಾಗಿ ಉತ್ತರ ಇದೆಯ?. ಅಥವಾ ಬಿಜೆಪಿಯ ಯಾವುದಾದರೂ ರಾಷ್ಟ್ರೀಯ ನಾಯಕರು ಇದರ ಬಗ್ಗೆ ಉತ್ತರಿಸುತ್ತಾರೆಯೇ ಎಂದು ಉಡುಪಿಯ ಸಂಸದರನ್ನು ಹಾಗೂ ಕೇಂದ್ರದ ಬಿಜೆಪಿ ನಾಯಕರನ್ನು ಉಡುಪಿ ಬ್ಲಾಕ್ ರಾಜೀವ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಇದರ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಬನ್ನಂಜೆ ಇವರು ಪ್ರಶ್ನಿಸಿರುತ್ತಾರೆ.


Leave a Reply

Your email address will not be published. Required fields are marked *

error: Content is protected !!