ಬೈಂದೂರು/ಕಾರ್ಕಳ/ಮಣಿಪಾಲ: ಮೂವರು ಆತ್ಮಹತ್ಯೆ

ಬೈಂದೂರು, ಜ.14: ಹುಬ್ಬಳಿಯಲ್ಲಿ ಗೂಡಂಗಡಿ ವ್ಯಾಪಾರ ಮಾಡುತ್ತಿದ್ದ ಕೃಷ್ಣ ದೇವಾಡಿಗ ಎಂಬವರು ವೈಯಕ್ತಿಕ ಕಾರಣ ದಿಂದ ಮನನೊಂದು ಬಿಜೂರು ಗ್ರಾಮದಲ್ಲಿರುವ ಸಂಬಂಧಿಕರ ಮನೆಯಲ್ಲಿ ಜ.13 ರಂದು ರಾತ್ರಿ ವೇಳೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಕಳ: ವೈಯಕ್ತಿಕ ಕಾರಣದಿಂದ ಮನನೊಂದು ಜ.9ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಕಾರ್ಕಳ ಹವಾಲ್ದಾರ ಬೆಟ್ಟು ನಿವಾಸಿ ಶ್ರೀನಿವಾಸ(46) ಎಂಬವರು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಜ.14ರಂದು ಬೆಳಗ್ಗೆ ಮೃತಪಟ್ಟಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಣಿಪಾಲ: 80 ಬಡಗುಬೆಟ್ಟು ಗ್ರಾಮದ ನೇತಾಜಿ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಗದಗ ಮೂಲದ ಅಲ್ಲಾಸಾಬ್ ಹಿರೇಕೊಪ್ಪ(27) ಎಂಬವರು ವಿಪರೀತ ಕುಡಿತದ ಚಟದಿಂದ ಮನನೊಂದು ಜ.13ರಂದು ರಾತ್ರಿ ಮರದ ಜಂತಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.”

Leave a Reply

Your email address will not be published. Required fields are marked *

error: Content is protected !!