ಯುವಬಂಟರ ಸಂಘ ಕಂಬಳಕಟ್ಟ: ಉಚಿತ ನೇತ್ರ ತಪಾಸಣೆ-ಕನ್ನಡಕ ವಿತರಣೆ

ಉಡುಪಿ: ಯುವಬಂಟರ ಸಂಘ ಕಂಬಳಕಟ್ಟ -ಕೊಡವೂರು, ಜೆಎಸ್ ಡಬ್ಲ್ಯೂ ಫೌಂಡೇಶನ್ ಮಂಗಳೂರು, ಲಯನ್ಸ್ ಕ್ಲಬ್ ಉಡುಪಿ-ಚೇತನ ಇವರುಗಳ ಆಶ್ರಯದಲ್ಲಿ ಇಂಡಿಯಾ ವಿಷನ್ ಇನ್ಸ್ಟಿಟ್ಯೂಟ್ ಇವರ ಸಹಯೋಗದೊಂದಿಗೆ ಉಚಿತ ನೇತ್ರ ತಪಾಸಣೆ ಹಾಗೂ ಕನ್ನಡಕ ವಿತರಣಾ ಕಾರ್ಯಕ್ರಮವು ಭಾನುವಾರ ಆದಿವುಡುಪಿ ಶಾಲೆಯಲ್ಲಿ ಜರುಗಿತು.

ದೀಪಬೆಳಗುವುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಮಾತಾನಾಡಿ ನಾವು ಸಮಾಜಕ್ಕೆ ನಮ್ಮಿಂದಾದ ಕಿಂಚಿತ್ ಕೊಡುಗೆ ನೀಡುವುದು ಮಾನವ ಧರ್ಮ. ಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಆಯೋಜಕರಿಗೆ ಅಭಿನಂದನೆ ಸಲ್ಲಿಸಿ ಮುಂದಿನ ದಿನಗಳಲ್ಲಿ ಇಂತಹ ಸಮಾಜಮುಖಿ ಕಾರ್ಯಕ್ರಮಗಳು ನಿರಂತರವಾಗಿರಲಿ ಎಂದು ಶುಭಹಾರೈಸಿದರು.

ಈ ಕಾರ್ಯಕ್ರಮದಲ್ಲಿ ಉಡುಪಿ ನಗರಸಭೆಯ ಅಧ್ಯಕ್ಷರಾದ ಪ್ರಭಾಕರ ಪೂಜಾರಿ ಹಾಗೂ ಸಮಾಜ ಸೇವಕ ಆದಿವುಡುಪಿ ಗೌರವ್ ಹೇರ್ ಸಲೂನ್‌ನ ಸತೀಶ್ ಸುವರ್ಣ ಇವರನ್ನು ಗೌರವಿಸಲಾಯಿತು. ಸುಮಾರು 200 ಕ್ಕೂ ಅಧಿಕ ಶಿಭಿರಾರ್ಥಿಗಳು ಪಾಲ್ಗೊಂಡ ಈ ಕಾರ್ಯಕ್ರಮದಲ್ಲಿ ಅರ್ಹ ಫಲಾನುಭವಗಳಿಗೆ ಉಚಿತ ವಾಗಿ ಕನ್ನಡಕ ವಿತರಿಸಲಾಯಿತು.

ಯುವಬಂಟರ ಸಂಘ್ ಅಧ್ಯಕ್ಷ ಕೆ.ಶಿವಪ್ರಸಾದ್ ಶೆಟ್ಟಿ ಮಜಲುಮನೆ ಅಧ್ಯಕ್ಷತೆ ವಹಿಸಿದ ಈ ಕಾರ್ಯಕ್ರಮದಲ್ಲಿ ಜೆ ಎಸ್ ಡಬ್ಲ್ಯೂ ಮಂಗಳೂರು ಇದರ ಕಂಟೈನರ್ ಮತ್ತು ಕೋಲ್ ಟರ್ಮಿನಲ್ ವಿಭಾಗದ ಉಪಾಧ್ಯಕ್ಷರಾದ ಎಲ್.ರಾಮನಾಥನ್, ಜನರಲ್ ಮ್ಯಾನೇಜರ್ ವ್ಯಾಪಾರ ಮತ್ತು ಅಭಿವೃದ್ಧಿ ಕಂಟೈನರ್ ವಿಭಾಗದ ದಿಲೀಪ್ ಶೆಟ್ಟಿ ,ಸಿ.ಎಸ್.ಆರ್ ಮ್ಯಾನೇಜರ್ ಪ್ರದೀಪ್ ಕೆ.ಆರ್, ಲಯನ್ಸ್ ಕ್ಲಬ್ ಜಿಲ್ಲೆ317 ಸಿ ನ ವಿಷನ್ ಕೇರ್ ಉಡುಪಿ ಜಿಲ್ಲಾ ಕ್ಯಾಬಿನೆಟ್ ಸದಸ್ಯರಾದ ಲಯನ್ ದಿನಕರ ಶೆಟ್ಟಿ .ಎಂ, ಉದ್ಯಮಿ ಪ್ರವೀಣ್ ಶೆಟ್ಟಿ,ಆದಿವುಡುಪಿ ಶಾಲಾ ಹಳೇವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ.ಭಾಸ್ಕರ ಶೆಟ್ಟಿ, ಇಂಡಿಯಾ ವಿಷನ್ ಸಂಸ್ಥೆಯ ವೈದ್ಯೆ ಡಾl ಜಾನೆಟ್, ಲಯನ್ಸ್ ಕ್ಲಬ್ ಉಡುಪಿ-ಚೇತನ ಇದರ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!