ಜನವರಿ 17 ರಿಂದ ಕಟಪಾಡಿ ದರ್ಗಾ ಉರೂಸ್ ಆರಂಭ
ಉಡುಪಿ: ಜಿಲ್ಲೆಯ ಇತಿಹಾಸ ಪ್ರಸಿದ್ಧವಾಗಿರುವ ಅಶೈಕ್ ಫಕೀರ್ ಶಾಹ್ ವಲಿಯುಲ್ಲಾಹಿ (ಖ.ಸಿ.) ರವರ ಉರೂಸ್ ಯಾನೆ ಝಿಯಾರತ್ ಸಮಾರಂಭ ಜನವರಿ 17 ರ ಶುಕ್ರವಾರದಿಂದ ರಿಂದ 19 ರ ಭಾನುವಾರದವರೆಗೆ ನಡೆಯಲಿದೆ.
ಆಪ್ರಯುಕ್ತ ಜನವರಿ 17 ರ ಶುಕ್ರವಾರ ಮಧ್ಯಾಹ್ನ ಜುಮಾ ನಮಾಝಿನ ಬಳಿಕ ಅಶೈಕ್ ಫಕೀರ್ ಶಾಹ್ ವಲಿಯುಲ್ಲಾಹಿ (ಖ.ಸಿ.) ರವರ ದರ್ಗಾದಲ್ಲಿ ಕೂಟು ಝಿಯಾರತ್ ನಂತರ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ. ಕಟಪಾಡಿ ಮಸೀದಿ ಖತೀಬರಾದ ಅಲ್ಹಾಜ್ ಕೆ.ಪಿ.ಬಶೀರ್ ಮದನಿ ದುಆ: ನೆರೆವೇರಿಸಲಿ ದ್ದು, ಮಸೀದಿ ಅಧ್ಯಕ್ಷರಾದ ಬಿ.ಎಮ್. ಮೊಹಿದ್ದೀನ್ ಎ.ಆರ್. ಉಡುಪಿ ಧ್ವಜಾರೋಹಣ ನಡೆಸಲಿದ್ದಾರೆ.
ಅದೇ ದಿನ ಸಂಜೆ ಇಶಾ ನಮಾಝಿನ ಬಳಿಕ ಸಭಾ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಹಾಗೂ ಜಲಾಲಿಯ್ಯ ದ್ಸಿಕ್ರ್ ಮಜ್ಲಿಸ್ ನಡೆಯಲಿದೆ. ಮುಹಮ್ಮದೀಯ ಮೊಹಲ್ಲಾ ಮಲ್ಲಾರು ಇಲ್ಲಿನ ಮೌಲಾನಾ ಲುಕ್ಮಾನ್ ರಝಾ ಮಿಸ್ಬಾಹಿ ಉದ್ಘಾಟನಾ ಭಾಷಣ ಮಾಡಲಿದ್ದಾರೆ. ಅಸ್ಸಯ್ಯದ್ ಕೆ.ಎಸ್. ಜಾಫರ್ ಸ್ವಾದಿಕ್ ತಂಙಳ್ ಕುಂಬೋಳ್ ಜಲಾಲಿಯ್ಯ ದ್ಸಿಕ್ರ್ ನ ನೇತ್ರತ್ವ ವಹಿಸಲಿದ್ದಾರೆ. ಚೊಕ್ಕಾಡಿ ಮಸೀದಿಯ ಧರ್ಮಗುರುಗಳಾದ ಮೌಲಾನಾ ಹಾಫಿಝ್ ಮುಹಮ್ಮದ್ ಶೇಝಾಝ್ ಅನ್ಸಾರಿ, ಕಟಪಾಡಿ ಮದ್ರಸದ ಸದರ್ ಗುರುಗಳಾದ ಯೂಸೂಫ್ ಝಹ್ರಿ ಉಪಸ್ಥಿತರಿರುವರು.
ಜನವರಿ 18 ರ ಶನಿವಾರ ಸಂಜೆ ಮಗ್ರಿಬ್ ನಮಾಝಿನ ಬಳಿಕ ಬ್ರಹತ್ ಸಂದಲ್ ಮೆರವಣಿಗೆ ನಡೆಯಲಿದೆ. ನಂತರ ಇಶಾ ನಮಾಝಿನ ಬಳಿಕ ಸಭಾ ಕಾರ್ಯಕ್ರಮ ದ ಸಮರೋಪ ಸಮಾರಂಭ ಜರುಗಲಿದ್ದು, ಕಟಪಾಡಿ ಮಸೀದಿ ಅಧ್ಯಕ್ಷರಾದ ಬಿ.ಎಮ್ ಮೊಹಿದ್ದೀನ್ ಎ.ಆರ್ ಉಡುಪಿ ಧ್ವಜಾರೋಹಣ ನಡೆಸಲಿದ್ದಾರೆ. ಅಧ್ಯಕ್ಷತೆ ವಹಿಸಲಿದ್ದಾರೆ. ಖ್ಯಾತ ವಾಗ್ಮಿ ಮುಹಮ್ಮದ್ ಅಝ್ಹರಿ ಪೇರೊಡ್ ದಿಕ್ಸೂಚಿ ಭಾಷಣ ಮಾಡಲಿದ್ದು, ಕಟಪಾಡಿ ಮಸೀದಿ ಖತೀಬರಾದ ಅಲ್ಹಾಜ್ ಕೆ.ಪಿ.ಬಶೀರ್ ಮದನಿ ಮತಪ್ರಭಾಷಣ ಮಡಲಿದ್ದಾರೆ. ಕಾಪುವಿನ ಧರ್ಮಗುರುಗಳಾದ ಖಾಝಿ ಅಹ್ಮದ್ ಖಾಸಿಮಿ, ಮೂಳೂರು ಸುನ್ನಿ ಸೆಂಟರ್ ನ ಯು.ಕೆ. ಮುಸ್ತಫ ಸಅದಿ, ಮಣಿಪುರ ಮಸೀದಿ ಖತೀಬರಾದ ಉಮರ್ ಕುಂಙ ಬದವಿ, ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷರಾದ ಸಿ.ಎಚ್. ಅಬ್ದುಲ್ ಮುತ್ತಲಿ ರಝ್ವಿ ಕಲ್ಕಟ್ಟ, ಅಚ್ಚಡ ಮಸಿದಿ ಖತೀಬರಾದ ಅಬ್ದುಲ್ ಹಖೀಂ ಸಖಾಫಿ, ಕಟಪಾಡಿ ಹಿದಾಯತುಲ್ ಇಸ್ಲಾಂ ಮದ್ರಸದ ಗುರಗಳಾದ ಮೌಲನಾ ಶಕೀಲ್ ಅಹ್ಮದ್ ಹಲಿಮಿ, ಮುಹಮ್ಮದ್ ಅಶ್ರಫ್ ಸದಿ, ಸರಕಾರಿಗುಡ್ಡೆ ಮದ್ರಸದ ಗುರುಗಳಾದ ಕೆ.ಎಚ್ ಇಬ್ರಾಹಿಂ ಸಖಾಫಿ, ಶೈಖ್ ಮುಹಮ್ಮದ್ ಇದ್ರಿಸ್ ರಜ್ವಿ, ಅಬ್ದುಲ್ ಸತ್ತಾರ್ ಫಾಳಿಲಿ, ನಿಝಾಮುದ್ದೀನ್ ರಶಾದಿ, ಅಚ್ಚಡ ಮದ್ರಸದ ಧರ್ಮಗುರುಗಳಾದ ನಝೀರ್ ಹುಸೈನ್ ಮುಸ್ಲಿಯಾರ್, ಹುಸೈನಾರ್ ಕೋಟೆ, ಕಟಪಾಡಿ ಮಸೀದಿ ಉಪಾಧ್ಯಕ್ಷರಾದ ಅಬ್ದುಲ್ ರಝಾಕ್ ವೈ.ಎಮ್, ಕೋಶಾಧಿಕಾರಿ ಅಬ್ದುಲ್ ರಝಾಕ್ , ಅಗ್ರಹಾರ್ ಮಸೀದಿ ಖತೀಬರಾದ ಅಬ್ದುಲ್ ರಶೀದ್ ರಝ್ವಿ ಉಪಸ್ಥಿತರಿರುವರು.
ಜನವರಿ 19 ರ ಭಾನುವಾರ ಬೆಳಿಗ್ಗೆ, 9.30 ರಿಂದ ಮೌಲೀದ್ ಮಜ್ಲಿಸ್ ನಡೆಯಲಿದ್ದು, ನಂತರ ಅನ್ನದಾನ ನೆರವೇರಲಿದೆ.