ಮಲ್ಪೆ: ಬಡನಿಡಿಯೂರಿನ ವ್ಯಕ್ತಿ ನಾಪತ್ತೆ
ಮಲ್ಪೆ: ಉಡುಪಿ ತಾಲೂಕು ಬಡಾನಿಡಿಯೂರು ಗ್ರಾಮದ ಕದಿಕೆ ಕಟ್ಟದಮನೆ ನಿವಾಸಿ ರಮೇಶ(37) ಜನವರಿ 12ರಿಂದ ನಾಪತ್ತೆಯಾಗಿದ್ದಾರೆ.
ಈ ಕುರಿತು ರಮೇಶ್ ಅವರ ತಾಯಿ ಜಲಜ ಅವರು ನೀಡಿರುವ ದೂರಿನಂತೆ ಜನವರಿ 12ರಂದು ರಾತ್ರಿ 10 ಗಂಟೆಗೆ ಬಡಾನಿಡಿಯೂರು ಗ್ರಾಮದ ಕದಿಕೆ ಕಟ್ಟದಮನೆಯಿಂದ ಹೋಗಿದ್ದಾರೆ. ಈವರೆಗೆ ಮನೆಗೂ ಬಾರದೇ ಸಂಬಂಧಿಕರ ಮನೆಗೂ ಹೋಗದೆ ಕಾಣೆಯಾಗಿದ್ದಾರೆ ಎಂದು ತಿಳಿಸಿದ್ದಾರೆ. ಪ್ರಕರಣ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.