ಉಡುಪಿ: ಬ್ಯಾಂಕ್ ಉದ್ಯೋಗಿ ನೇಣಿಗೆ ಶರಣು
ಉಡುಪಿ,ಜ.14: ಆದರ್ಶ್ ಆಸ್ಪತ್ರೆಯ ಬಳಿ ಇರುವ, ವಸತಿ ಸಂಕೀರ್ಣದ ನಾಲ್ಕನೇ ಮಹಡಿಯಲ್ಲಿ ವಾಸವಾಗಿದ್ದ ಗೋಪಾಲ ಕೃಷ್ಣ ಪ್ರಭು ಎನ್ನುವರು ಫ್ಯಾನಿಗೆ ನೇಣುಬಿಗಿದು ಆತ್ಮಹತ್ಯೆಗೈದಿರುವ ಘಟನೆ ನಡೆದಿದೆ.
ಮೃತ ವ್ಯಕ್ತಿ ಮಹಾರಾಷ್ಟ್ರ ಎಫೆಕ್ಸ್ ಬ್ಯಾಂಕ್ ಉದ್ಯೋಗಿ, ಮಾನಸಿಕ ಖಿನ್ನತೆಯಿಂದ. ಬಳಲುತ್ತಿದ್ದರೆಂದು ತಿಳಿದುಬಂದಿದೆ.
ನಗರ ಪೋಲಿಸ್ ಠಾಣೆಯ ಎಎಸ್ಐ ಜಯಕರ್ ಹಾಗೂ ಸಿಬ್ಬಂದಿಗಳು ಮಹಜರು ಪ್ರಕ್ರಿಯೆ ನಡೆಸಿದರು. ಮರಣೋತ್ತರ ಪರೀಕ್ಷೆಗೆ ಶವವನ್ನು ಜಿಲ್ಲಾಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ಸಮಾಜಸೇವಕ ನಿತ್ಯಾನಂದ ಒಳಕಾಡುವರು ನೆರವಾದರು.