ಕಥೊಲಿಕ್ ಸಭಾ ಉದ್ಯಾವರ ಘಟಕ: ನೂತನ ಅಧ್ಯಕ್ಷರಾಗಿ ಸ್ಟೀವನ್ ಲೂಯಿಸ್
ಉಡುಪಿ, ಜ13(ಉಡುಪಿ ಟೈಮ್ಸ್ ವರದಿ): ಕಥೊಲಿಕ್ ಸಭಾ ಉದ್ಯಾವರ ಘಟಕದ 2025-26 ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಸಭೆ ಚರ್ಚ್‌ನ ಮಿನಿ ಸಭಾಂಗಣದಲ್ಲಿ ನಡೆಯಿತು.
ಅಧ್ಯಕ್ಷರಾಗಿ ಸ್ಟೀವನ್ ಲೂಯಿಸ್, ಕಾರ್ಯದರ್ಶಿ ಉಷಾ ಲೋಬೊ, ಕೋಶಾಧಿಕಾರಿ ಜಾನೆಟ್ ಆಲ್ಮೇಡ ಹಾಗೂ ಆಮ್ಚೊ ಸಂದೇಶ್ ಪತ್ರಿಕೆಯ ಪ್ರತಿನಿಧಿಯಾಗಿ ಸ್ಟೀವನ್ ಕೆಮ್ತೂರ್ ಇವರನ್ನು ಆರಿಸಲಾಯಿತು.
ಅಲ್ಲದೇ ಉಪಾಧ್ಯಕ್ಷರಾಗಿ ಎಡ್ವಿನ್ ಲುವಿಸ್, ನಿಯೋಜಿತ ಅಧ್ಯಕ್ಷ ರೋಯ್ಸ್ ಫೆರ್ನಾಂಡಿಸ್, ಸಹಕಾರ್ಯದರ್ಶಿ ಪ್ರೆಸಿಲ್ಲಾ ಮಚಾದೊ , ಜೊತೆ ಕೋಶಾಧಿಕಾರಿ ಸ್ಯಾಂಡ್ರಾ ಕ್ರಾಸ್ತಾ, ರಾಜಕೀಯ ಸಂಚಾಲಕ ಆಲ್ವಿನ್ ಆಂದ್ರಾದೆ, ಸರಕಾರಿ ಸೌಲಭ್ಯದ ಸಂಚಾಲಕ ರೋಜ್ಲಿನ್ ಆಲ್ಮೇಡ, ಆಂತರಿಕ ಲೆಕ್ಕಪರಿಶೋಧಕ ಡೊರಿನ್ ಪಿಂಟೊ, ಸ್ವಯಂ ಸೇವಕರಾಗಿ ರೋಬರ್ಟ್ ಡಿಸೋಜಾ, ಆಸ್ಟಿನ್ ಕಾರ್ಡೋಜಾ, ವಿಕ್ಟರ್ ಡಿಸೋಜಾ, ಟ್ರೀಜ ಫೆರ್ನಾಂಡಿಸ್, ಗ್ಲೋರಿಯಾ ಪಿಂಟೊ ಹಾಗೂ ನಿಕಟಫೂರ್ವ ಅಧ್ಯಕ್ಷೆ ಐರಿನ್ ಪಿರೇರಾ ಮತ್ತು ನಿರ್ದೇಶಕರಾಗಿ ಫಾದರ್ ವಂ.ಅನಿಲ್ ಡಿಸೋಜಾ ರವರನ್ನು ಆಯ್ಕೆ ಮಾಡಲಾಯಿತು. ಚುನಾವಣೆ ಅಧಿಕಾರಿಯಾಗಿ ಸ್ಟ್ಯಾನಿ ಮಿನೇಜಸ್ ಉಡುಪಿ ಹಾಗೂ ವೀಕ್ಷಕಾರಾಗಿ ರೊನಾಲ್ಡ್ ಆಲ್ಮೇಡ ಉದ್ಯಾವರ ಉಪಸ್ಥಿತರಿದ್ದರು.