ಹೆಬ್ರಿ ವ್ಯವಸಾಯ ಸೇ. ಸಂಘ ಚುನಾವಣೆ: 10 ಮಂದಿ ಕಾಂಗ್ರೆಸ್ 2 ಬಿಜೆಪಿ ಬೆಂಬಲಿತರು ಆಯ್ಕೆ
ಹೆಬ್ರಿ : ಹೆಬ್ರಿ ವ್ಯವಸಾಯ ಸೇವಾ ಸಹಕಾರ ಸಂಘದ ಆಡಳಿತ ಮಂಡಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ 10 ಮಂದಿ ಕಾಂಗ್ರೆಸ್ ಬೆಂಬಲಿತರು ಹಾಗೂ 2 ಮಂದಿ ಬಿಜೆಪಿ ಬೆಂಬಲಿತರು ಆಯ್ಕೆಯಾಗಿದ್ದಾರೆ.
ಅಧ್ಯಕ್ಷರಾಗಿದ್ದ ಭೂತುಗುಂಡಿ ಕರುಣಾಕರ ಶೆಟ್ಟಿಅವರು ಅತ್ಯಧಿಕ ಮತಗಳಿಂದ ಜಯಗಳಿಸಿದ್ದಾರೆ. ಹಿಂದೆ ಅಧ್ಯಕ್ಷರಾಗಿದ್ದ ನವೀನ್ ಕೆ ಅಡ್ಯಂತಾಯ, ನಿರ್ದೇಶಕರಾಗಿದ್ದ ಪುಟ್ಟಣ್ಣ ಭಟ್, ಸುಧಾ ಜಿ.ನಾಯಕ್, ಹೊಸ ಮುಖಗಳಾದ ಬೇಳಂಜೆ ಹರೀಶ್ ಪೂಜಾರಿ, ಮಹೇಶ್ ಶೆಟ್ಟಿ ಕುಚ್ಚೂರು, ಜಗನ್ನಾಥ ಕುಲಾಲ್ ಶಿವಪುರ, ದಯಾನಂದ ಶೆಟ್ಟಿ ಚಾರ, ಕೆ ದೇವು ಕನ್ಯಾನ ಮತ್ತು ರಾಘವೇಂದ್ರ ನಾಯ್ಕ್ ಇಂದಿರನಗರ ಹೆಬ್ರಿ ಜಯಗಳಿಸಿದ್ದಾರೆ.
ಬಿಜೆಪಿ ಬೆಂಬಲಿತರಾಗಿ ಹಿಂದೆ ಅಧ್ಯಕ್ಷರಾಗಿದ್ದ ಅಮೃತ್ ಕುಮಾರ್ ಶೆಟ್ಟಿ ಬೇಳಂಜೆ ಹಾಗೂ ಮಾಜಿ ನಿರ್ದೇಶಕಿ ವೀಣಾ ಪ್ರಭು ಜಯಗಳಿಸಿದ್ದಾರೆ. ಕಳೆದ ಅವಧಿಯಲ್ಲಿ ೬ ಸ್ಥಾನ ಹೊಂದಿದ್ದ ಬಿಜೆಪಿ ಬೆಂಬಲಿತರು 4 ಸ್ಥಾನ ಕಳೆದುಕೊಂಡಿದ್ದಾರೆ. 6 ಸ್ಥಾನ ಹೊಂದಿದ್ದ ಕಾಂಗ್ರೆಸ್ ಬೆಂಬಲಿತರು 10 ಸ್ಥಾನಕ್ಕೇರಿದ್ದಾರೆ.
ಸಹಕಾರಿ ಅಭಿವೃದ್ಧಿ ಅಧಿಕಾರಿ ಸುನಿಲ್ ಕುಮಾರ್ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.
ಹೆಬ್ರಿ ಪೇಟೆಯ ಸರ್ಕಲ್ ನಲ್ಲಿ ಕಾಂಗ್ರೆಸ್ ಬೆಂಬಲಿತರು ವಿಜಯೋತ್ಸವ ಆಚರಿಸಿದರು.