ದೆಹಲಿಯ ಗಣರಾಜ್ಯೋತ್ಸವದಲ್ಲಿ ಭಾಗವಹಿಸಲು 80ನೇ ಬಡಗಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಆಹ್ವಾನ
ಉಡುಪಿ: ಜಲಜೀವನ ಮಿಷನ್ ಯೋಜನೆಯಡಿ ಉತ್ತಮವಾಗಿ ಕಾರ್ಯನಿರ್ವಹಿಸಿ ಹರ್ ಫರ್ ಜಲ್ ಎಂದು ಘೋಷಿಸಿದ ಗ್ರಾಮಗಳ ಪೈಕಿ ಮುಖ್ಯವಾಗಿ ಕಾರ್ಯಾಚರಣೆ ಮತ್ತು ನಿರ್ವಹಣೆ ಸಾಧಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಗಳ ಸದಸ್ಯರಾಗಿ ಉಡುಪಿ ಜಿಲೆಯ ಉಡುಪಿ ತಾಲೂಕಿನ 80-ಬಡಗುಬೆಟ್ಟು ಗ್ರಾಮ ಪಂಚಾಯತ್ ಕೇಶವ ಕೋಟ್ಯಾನ್ ಇವರನ್ನು ಆಯ್ಕೆ ಮಾಡಲಾಗಿದೆ. ಜ.26 ರಂದು ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಲು ಆಹ್ವಾನಿಸಲಾಗಿದೆ.
ಕೇಶವ ಕೋಟ್ಯಾನ್ 80 ಬಡಗಬೆಟ್ಟು ಗ್ರಾಮದ ನಿವಾಸಿಯಾಗಿರುವ ಇವರು ಎಂ.ಕಾಂ ಸ್ನಾತಕೋತ್ತರ ಪದವಿಯನ್ನು ಪಡೆದಿರುತ್ತಾರೆ.
1) ಸಾಮಾಜಿಕ ಸೇವಾ ಕಾರ್ಯಗಳ ಮೂಲಕ ಮೊತ್ತ ಮೊದಲಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ 80 ಬಡಗಬೆಟ್ಟು ಗ್ರಾಮದ ಒಕ್ಕೂಟದ ಮೊದಲ ಅಧ್ಯಕ್ಷರಾಗಿ ತನ್ನ ಸಾರ್ವಜನಿಕ ಸೇವೆಯನ್ನು ಪ್ರಾರಂಭಿಸಿದ್ದರು.
2) ಸ್ನೇಹ ಯೂತ್ ಕ್ಲಬ್ ಬಾಲ್ಕಟ್ಟ, ಸಂಗಮ ಕಲಾವಿದೆರ್ ಮಣಿಪಾಲ , ಬ್ರಹ್ಮಶ್ರೀ ಸೇವಾ ಸಂಘ ಪರ್ಕಳ, ಬಿಲ್ಲವ ಜನ ಜಾಗೃತಿ, ಬ್ರಹ್ಮ ಬೈದರ್ಕಳ ಗರಡಿ , ಬಬ್ಬು ಸ್ವಾಮಿ ದೇವಸ್ಥಾನ ಬಡಗಬೆಟ್ಟು ಹೀಗೆ ಹತ್ತು ಹಲವಾರು ಸಂಘ ಸಂಸ್ಥೆಗಳಲ್ಲಿ ಜವಾಬ್ದಾರಿಯುತ ಹುದ್ದೆಗಳ ನಿರ್ವಹಣೆ.
3) ಗ್ರಾಮದ ಮಗುಸ್ನೇಹಿ ಪಂಚಾಯತಿಯ “ಬಾಲ ಮಿತ್ರ” ಸಂಯೋಜಕರಾಗಿ ಕರ್ತವ್ಯ ನಿರ್ವಹಣೆ.
4) ರೈತ ಸಂಪರ್ಕ ಕೇಂದ್ರ, ಉಡುಪಿ ಇವರ ಸಹಯೋಗದಲ್ಲಿ ಮೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ರೈತ ಅನುವುಗಾರರಾಗಿ ರೈತರಿಗೆ ಕೃಷಿ ಪಾಠ ಶಾಲೆ ಹಾಗೂ ಹೋಬಳಿ ಮಟ್ಟದ ಕಾರ್ಯಕ್ರಮಗಳ ಯಶಸ್ವಿ ನಿರ್ವಹಣೆ.
5) ರಂಗಭೂಮಿ ಕಲಾವಿದರಾಗಿ, ನಾಟಕ ರಚನೆಕಾರರಾಗಿ, ನಿರ್ದೆಶಕರಾಗಿ ರಾಷ್ಟ್ರೀಯ ನಾಟಕ ಶಾಲೆ ನವದೆಹಲಿ ಇಲ್ಲಿ ನಡೆದ ರಾಷ್ಟ್ರೀಯ ರಂಗೋತ್ಸವದಲ್ಲಿ ಮೊತ್ತ ಮೊದಲ ತುಳು ರಂಗಭೂಮಿ ನಾಟಕದಲ್ಲಿ ಅಭಿನಯಿಸಿದ ಇವರು ಕಾರ್ಯಕ್ರಮ ನಿರೂಪಕರಾಗಿ ಚಿರಪರಿಚಿತರು.
6) ಉಡುಪಿ ಜಿಲ್ಲೆಯಲ್ಲಿಯೇ ಪ್ರತಿಷ್ಠಿತ ಮಾದರಿ ಗ್ರಾಮ ಪಂಚಾಯತಿ 80 ಬಡಗಬೆಟ್ಟು ಪಂಚಾಯಿತಿಗೆ ಸತತ ಮೂರು ಬಾರಿ ಗ್ರಾಮ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿ ಪ್ರಸ್ತುತ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸತತ ಎರಡು ಬಾರಿ ರಾಜ್ಯದ ಸರ್ಕಾರದ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಈ ನಮ್ಮ ಅವಧಿಯಲ್ಲಿ ಪುರಸ್ಕಾರಕ್ಕೆ ಆಯ್ಕೆಯಾಗಿರುತ್ತದೆ. ಅಂತೆಯೇ ಸತತ ಎರಡು ಬಾರಿಗೆ ಕೋಟ ಶಿವರಾಮ ಕಾರಂತ ಪ್ರಶಸ್ತಿಗೆ ಆಯ್ಕೆಯಾಗಿ ಕಳೆದ ಬಾರಿ ಘನತೆವೆತ್ತ ಕರ್ನಾಟಕದ ರಾಜ್ಯಪಾಲರಿಂದ ಈ ಬಾರಿ ಮೇಘಾಲಯದ ರಾಜ್ಯಪಾಲರಿಂದ ಪ್ರಶಸ್ತಿಯನ್ನು ಸ್ವೀಕರಿಸಲಾಗಿದೆ.