ಕೊರೊನಾ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಿದ ಗೃಹರಕ್ಷಕರಿಗೆ ಸನ್ಮಾನ
ಉಡುಪಿ: ಕೊರೋನಾ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಿದ 16 ಮಂದಿ ಕೊರೋನಾ
ವಾರಿರ‍್ಸ್ ಗೃಹರಕ್ಷಕರನ್ನು ರೋಟರಿ ಗವರ್ನರ್ ರಾಜಾರಾಮ್ ಭಟ್ ಬುಧವಾರ ಜಿಲ್ಲಾ ಗೃಹರಕ್ಷಕ ದಳದ ಕಚೇರಿಯಲ್ಲಿ ಸನ್ಮಾನಿಸಿದರು.
ಉಡುಪಿ ಜಿಲ್ಲೆಯ 8 ಘಟಕಗಳಿಂದ 16 ಮಂದಿ ಗೃಹರಕ್ಷಕರನ್ನು ಸನ್ಮಾನಿಸಿದ ರೋಟರಿ ಗವರ್ನರ್ ಗೃಹರಕ್ಷಕರನ್ನು ಅಭಿನಂದಿಸಿ ಮಾತನಾಡಿ, ಸಮಾಜಸೇವೆ ಸಲ್ಲಿಸುವುದು ಮಾನವನ ಭಾವನಾತ್ಮಕ ವಿಚಾರ. ನಿರಂತರವಾಗಿ ಎಲ್ಲಾ
ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಸಿಗುವ ಆತ್ಮತೃಪ್ತಿ ವಿಶಿಷ್ಟವಾದುದು ಎಂದ ಅವರು ರೋಟರಿ ಕ್ಲಬ್ ಒಳ್ಳೆಯ ಸೇವೆಯನ್ನು ಸಮಾಜಕ್ಕೆ ನೀಡುತ್ತಿರುವುದಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಉಪರಾಜ್ಯಪಾಲ ದೇವದಾಸ್ ವಿ ಶೆಟ್ಟಿಗಾರ್, ಕಾರ್ಯದರ್ಶಿ ನವೀನ್‌ಚಂದ್ರ ಸಾಲ್ಯಾನ್, ಜಿಲ್ಲಾ ಸಮಾದೇಷ್ಟ ಡಾ. ಪ್ರಶಾಂತ್ ಶೆಟ್ಟಿ ಉಪಸ್ಥಿತರಿದ್ದರು. ಅಂಬಲಪಾಡಿ ರೋಟರಿ ಕ್ಲಬ್‌ನ ಅಧ್ಯಕ್ಷ ಗಣೇಶ್ ಕುಮಾರ್ ಮಟ್ಟು ಸ್ವಾಗತಿಸಿದರು. ಉಪಸಮಾದೇಷ್ಟ ರಮೇಶ್ ವಂದಿಸಿದರು.