ಬಿಗ್‌ ಬಾಸ್‌ ಸೀಸನ್‌ 11 : ಈ ವಾರ ಫೈರ್‌ ಬ್ರಾಂಡ್‌ ಚೈತ್ರಾ ಕುಂದಾಪುರ ಹೊರಕ್ಕೆ

ಬೆಂಗಳೂರು: ಇನ್ನೇನು ಕೆಲವೇ ದಿನಗಳಲ್ಲಿ ಬಿಗ್‌ಬಾಸ್‌ ಸೀಸನ್‌ 11 ಅಂತ್ಯವಾಗಲಿದೆ. ಫಿನಾಲೆಗೆ ಹತ್ತಿರವಾಗುತ್ತಿದ್ದಂತೆ ಬಿಗ್‌ಬಾಸ್‌ ಸ್ಪರ್ಧಿಗಳು ಬಹಳ ಅಗ್ರೆಸ್ಸಿವ್‌ ಆಗಿ ಆಟ ಆಡುತ್ತಿದ್ದಾರೆ. ಈ ವಾರ ಎಲ್ಲಾ ಸ್ಪರ್ಧಿಗಳೂ ಕೂಡ ಟಿಕೇಟ್‌ ಟು ಫಿನಾಲೆ ಟಿಕೇಟ್‌ ಅನ್ನು ಪಡೆಯಲು ಹರಸಾಹಸ ಪಟ್ಟಿದ್ದು, ಆಟದ ಭರದಲ್ಲಿ ಹಲವರು ಅನೇಕ ತಪ್ಪುಗಳನ್ನು ಮಾಡಿದ್ದರು. ಈ ಹಿನ್ನೆಲೆ ವಾರಾಂತ್ಯದಲ್ಲಿ ‌ಸುದೀಪ್‌ ಅವರು ಸ್ಪರ್ಧಿಗಳಿಗೆ ಸರಿಯಾಗಿ ಕ್ಲಾಸ್‌ ತೆಗೆದುಕೊಂಡಿದ್ದು, ತಪ್ಪು ಮಾಡಿದವರಿಗೆ ಬಿಸಿ ಕೂಡ ಮುಟ್ಟಿಸಿದ್ದಾರೆ.

ಈ ನಡುವೆ ಈ ವಾರ ಯಾರು ಮನೆಯಿಂದ ಹೊರಹೋಗಬಹುದು ಎನ್ನುವ ಕುತೂಹಲ ಎಲ್ಲರಲ್ಲೂ ಮನೆ ಮಾಡಿದ್ದು, ಇದೀಗ ಈ ಕುತೂಹಲಕ್ಕೆ ಬ್ರೇಕ್‌ ಬಿದ್ದಿದೆ. ಹೌದು, ಈ ವಾರ ಬಿಗ್‌ಬಾಸ್‌ ಮನೆಯಲ್ಲಿ ಯಾರು ಮನೆಯಿಂದ ಹೊರನಡೆಯುತ್ತಾರೆ. ಸಿಂಗಲ್‌ ಎಲಿಮನೇಶನ್‌ ಅಥವಾ ಡಬಲ್‌ ಎಲಿಮನೇಶನ್‌ ನಡೆಯುತ್ತದೆಯಾ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿ ಮನೆ ಮಾಡಿತ್ತು. ಇದೀಗ ಆ ಕುತೂಹಲಕ್ಕೆ ತೆರ ಬಿದ್ದಿದ್ದು, ನಾಮಿನೇಟ್‌ ಆಗಿದ್ದ ಐವರ ಪೈಕಿ ಫೈರ್‌ ಬ್ರ್ಯಾಂಡ್‌ ಚೈತ್ರಾ ಕುಂದಾಪುರ ಅವರು ಮನೆಯಿಂದ ಹೊರನಡೆದಿದ್ದಾರೆ ಎನ್ನಲಾಗಿದೆ.

ಟಾಸ್ಕ್‌ ಗೆದ್ದು ನೇರವಾಗಿ ಫಿನಾಲೆಗೆ ಆಯ್ಕೆ ಆಗಿರುವ ಹನುಮಂತು ಅವರಿಗೆ ಮೆಚ್ಚುಗೆ ವ್ಯಕ್ತಪಡಿಸುವುದರ ಜೊತೆಗೆ ಶುಭ ಹಾರೈಸಿದ ಕಿಚ್ಚ ಸುದೀಪ್‌, ಮನೆಯ ಕ್ಯಾಪ್ಟನ್‌ ಆಗಿದ್ದ ರಜತ್‌ ಅವರ ಉಸ್ತುವಾರಿಯಲ್ಲಿ ಆಗಿರುವ ಅನೇಕ ತಪ್ಪುಗಳನ್ನು ಎತ್ತಿ ಹಿಡಿದು, ಮನವರಿಕೆ ಮಾಡಿಕೊಟ್ಟಿದ್ದಾರೆ.

Leave a Reply

Your email address will not be published. Required fields are marked *

error: Content is protected !!