ಲಾಸ್‌ಏಂಜಲೀಸ್‌ನ ಭೀಕರ ಕಾಡ್ಗಿಷ್ಷು: ಸಾವಿನ ಸಂಖ್ಯೆ 16ಕ್ಕೆ ಏರಿಕೆ- ಲಕ್ಷಕ್ಕೂ ಅಧಿಕ ಮಂದಿ ಸ್ಥಳಾಂತರ!
ಲಾಸ್ ಏಂಜಲೀಸ್: ಕ್ಯಾಲಿಫೋರ್ನಿಯಾದ ಲಾಸ್ ಏಂಜಲಲೀಸ್ ನಲ್ಲಿ ನಡೆದ ಭೀಕರ ಕಾಡ್ಗಿಚ್ಚಿನಿಂದಾಗಿ ಈಗಾಗಲೇ ಅಪಾರ ಪ್ರಾಣ ಹಾನಿ ಹಾಗೂ ಆಸ್ತಿ ಹಾನಿ ಸಂಭವಿಸಿದೆ. ಈವರೆಗೆ ಕಾಡ್ಗಿಚ್ಚಿನಿಂದಾಗಿ 16 ಮಂದಿ ಸಾವನ್ನಪ್ಪಿರುವ ಕುರಿತು ವರದಿಯಾಗಿದ್ದು, 12 ಸಾವಿರಕ್ಕೂ ಅಧಿಕ ಕಟ್ಟಡಗಳು ಬೆಂಕಿಗಾಹುತಿಯಾಗಿದೆ ಎನ್ನಲಾಗಿದೆ.
ಲಾಸ್ ಏಂಜಲೀಸ್‌ನಲ್ಲಿ ಕಳೆದ ಎಂಟು ತಿಂಗಳಿನಿಂದ ಮಳೆ ಸುರಿದಿರಲಿಲ್ಲ, ಸಾಂತಾ ಅನಾ ಎನ್ನುವ ಒಣ ಹವೆಯಿಂದಾಗಿ ಜ. 7ರಂದು ಉಂಟಾದ ಬೆಂಕಿಯ ಕೆನ್ನಾಲಿಗೆ ಭೀಕರ ದುರಂತಕ್ಕೆ ಕಾರಣವಾಗಿದೆ.
ಅದಿನಿಂದ ಈವರೆಗೆ ಸುಮಾರು 39ಸಾವಿರ ಎಕರೆಗಳಷ್ಟು ಭೂಮಿ ಸುಟ್ಟು ಹೋಗಿದೆ ಎಂದು ಅಂದಾಜಿಸಲಾಗಿದೆ. 1ಲಕ್ಷಕ್ಕೂ ಅಧಿಕ ಮಂದಿ ಈಗಾಗಲೇ ಸ್ಥಳಾಂತರಗೊಂಡಿದ್ದು, ಕಾಡ್ಗಿಚ್ಚಿನಿಂದಾಗಿ 13ಮಂದಿ ಕಾಣೆಯಾಗಿದ್ದು, ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎನ್ನಲಾಗಿದೆ. ಇನ್ನು, ಕಾಡ್ಗಿಚ್ಚಿನಿಂದಾಗಿ ಹಾಲಿವುಡ್ ನಟ-ನಟಿಯರ ಮನೆಗಳೂ ಕೂಡ ಸುಟ್ಟು ಭಸ್ಮವಾಗಿದೆ ಎಂದು ಹೇಳಲಾಗಿದ್ದು, ಬೆಂಕಿಯನ್ನು ನಂದಿಸಲು ಕ್ಯಾಲಿಫೋರ್ನಿಯಾ 1,400ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿಯನ್ನು ನಿಯೋಜಿಸಿರುವ ಕುರಿತು ವರದಿಯಾಗಿದೆ.