ಇಂದು (ಜ.12) ಅಜ್ಜರಕಾಡು ಭುಜಂಗ ಪಾರ್ಕ್‌ನಲ್ಲಿ ಅರವಿಂದ ಬೋಳಾರ್ ನಟನೆಯ “ಒರಿಯಾಂಡಲ ಸರಿ ಬೋಡು” ತುಳು ನಾಟಕ

ಉಡುಪಿ: ಶ್ರೀನಾರಾಯಣ ಗುರು ಯುವ ವೇದಿಕೆ ಉಡುಪಿ ಇವರ ಆಶ್ರಯದಲ್ಲಿ ಲಕುಮಿ ತಂಡದ ಕುಸಾಲ್ದ ಕಲಾವಿದರು ಮಂಗಳೂರು ಅಭಿನಯಿಸುವ, ಲಯನ್ ಡಿ ಕಿಶೋರ್ ಶೆಟ್ಟಿ ನಿರ್ದೇಶನದ, ಕುಸಾಲ್ದ್ ಮಾಣಿಕ್ಯ ಅರವಿಂದ ಬೋಳಾರ್ ನಟಿಸಿರುವ ಈ ವರ್ಷದ ಸೂಪರ್ ಹಿಟ್ ತುಳು ನಾಟಕ “ಒರಿಯಾಂಡಲ ಸರಿ ಬೋಡು” ಎಂಬ ನಾಟಕ ಪ್ರದರ್ಶನ ನಡೆಯಲಿದೆ.

ಸಂಜೆ 6:15 ರಿಂದ ಪ್ರಾರಂಭಗೊಳ್ಳುವ ಈ ನಾಟಕಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ ಮತ್ತು ಎಂದಿಗೂ ಕಲಾವಿದರನ್ನು ಪ್ರೋತ್ಸಾಹಿಸುವ ಉಡುಪಿ ಪರಿಸರದ ಜನತೆ ಈ ನಾಟಕ ಪ್ರದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮವನ್ನು ಯಶಸ್ವಿ ಮಾಡಿಕೊಡಬೇಕೆಂದು ಶ್ರೀ ನಾರಾಯಣ ಗುರು ಯುವ ವೇದಿಕೆ ಉಡುಪಿ ಇದರ ಪದಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!