ಕಟಪಾಡಿ ಸಿಎ ಬ್ಯಾಂಕಿನಲ್ಲಿ ಅವ್ಯವಹಾರ- ಪ್ರಧಾನ ಕಚೇರಿ ಮುಂಭಾಗ ಪ್ರತಿಭಟನೆ
ಉಡುಪಿ: ಕಾಪು ತಾಲೂಕಿನ ಕಟಪಾಡಿ ಸಹಕಾರಿ ವ್ಯವಸಾಯಿಕ ಸಂಘದಲ್ಲಿ ನಡೆದಿರುವ ಅವ್ಯವಹಾರ
ನಡೆದಿದ್ದು ಸಾರ್ವಜನಿಕರು ಇಂದು ಪ್ರಧಾನ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಸಭೆಯಲ್ಲಿ ನ್ಯಾಯವಾದಿ ಸುಂದರ್ ಆಚಾರ್ಯ ಬ್ಯಾಂಕಿನಲ್ಲಿ ನಡೆದ ಅವ್ಯವಹಾರದ ಬಗ್ಗೆ ಸವಿವರವಾದ ಮಾಹಿತಿ ನೀಡಿದರು. ಅದೇ ರೀತಿ
ಕಟಪಾಡಿ ಸಿ.ಎ. ಬ್ಯಾಕ್‌ನ ಮಾಜಿ ಅಧ್ಯಕ್ಷರಾದ ಕಟಪಾಡಿ ಶಂಕರ್ ಪೂಜಾರಿ ತಮ್ಮ ಅವಧಿಯಲ್ಲಿ ಉತ್ತಮ ವ್ಯವಹಾರ ಇದ್ದು, ಇತ್ತೀಚಿನ 10 ವರ್ಷದಲ್ಲಿ ಬಂದ ಆಡಳಿತದಿಂದಾಗಿ ಬ್ಯಾಂಕ್ ಆಡಳಿತ ಮಂಡಳಿಯ ದುರಾಡಳಿತವನ್ನು ಪ್ರತಿಭಟನಾಕಾರರಿಗೆ ತಿಳಿಸಿ ಬ್ಯಾಂಕ್ ಮುಂದಿನ ಅವಧಿಯಲ್ಲಿ ಇದೇ ಆಡಳಿತ ಸಮಿತಿಯ ಕೈಯಲ್ಲಿ ಇದ್ದರೆ ಬ್ಯಾಂಕ್ ಮುಳುಗಡೆಯಾಗುವುದು ಖಂಡಿತ ಎಂದರು.
ಅದೇ ರೀತಿ ಸುನೀಲ್ ಡಿ. ಬಂಗೇರ ಮಾತನಾಡಿ ಕಳೆದ 15 ವರ್ಷದಿಂದ ಸಾಲ ಸುಸ್ತೀದಾರರಲ್ಲಿ ಬ್ಯಾಂಕ್ ನಿರ್ದೇಶಕರಾದ ಮುರುಳೀಧರ್ ಪೈಯವರ ಕುಟಂಬಸ್ಥರ ಹೆಸರಿನಲ್ಲಿ 15ಲಕ್ಷ ರೂ. ಸಾಲ ಪಡೆದು ಹಾಗೆನೇ ಕಟಪಾಡಿಯ ರಾಜಕಾರಣಿಯೊಬ್ಬರ ಹೆಸರಿನಲ್ಲಿ 15 ಲಕ್ಷ ರೂ. ಸಮರ್ಪಕವಾದ ದಾಖಲೆಯಿಲ್ಲದೆ ನೀಡಿದ್ದು ಈ ಸಂದರ್ಭದಲ್ಲಿ ಕೋರ್ಟ್ ಮೆಟ್ಟಿಲೇರಿ ಅದೇ ವ್ಯವಸ್ಥಾಪಕರು ನಾಮ ಪತ್ರವನ್ನು ಸಲ್ಲಿಸುವುದು ಸೂಕ್ತವಲ್ಲ ಎಂದು ತಿಳಿಸಿದರು.
ಅದೇ ರೀತಿ 8 ತಿಂಗಳ ಹಿಂದೆ ರಿಯಾನತ್ ಬಾನು ಎಂಬವರ ಹೆಸರಿಗೆ ನಕಲಿ ದಾಖಲೆಯನ್ನು ನೀಡಿ 45 ಲಕ್ಷ ರೂ. ಸಾಲ ನೀಡಿರುವ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿದರು. ಈ ಸಭೆಯಲ್ಲಿ ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ನಿತಿನ್ ಸುವರ್ಣ, ದಯಾನಂದ ವಿ. ಬಂಗೇರ, ಕಟಪಾಡಿ ಪಂಚಾಯತ್ ಅಧ್ಯಕ್ಷರಾದ ಪ್ರಭಾ ಶೆಟ್ಟಿ, ನಹೀಮ್, ವಿಜಯ್ ಮಾಬಿಯಾನ್, ಶ್ರೀಕರ್ ಅಂಚನ್, ಆಶಾ ಅಂಚನ್,
ಜೋಸೆಫ್ ಮಂತೆರೋ,ಆಗ್ನೇಸ್ ದೇಸಾ,ಅಬೂಬಕರ್, ಅನ್ವರ್, ಪ್ರಭಾಕರ ಆಚಾರ್ಯ, ಶಿವಣ್ಣ ಶೆಟ್ಟಿ, ಸುಗುಣ
ಪೂಜಾರಿ, ಆನಂದ್, ಸುಧೀರ್ ಕರ್ಕೇರ, ನವೀನ್ ಎನ್. ಶೆಟ್ಟಿ, ಕಿಶೋರ್ ಅಂಬಾಡಿ, ಸತೀಶ್ ಮೂಳೂರು, ಕಿರಣ್ ಲೂಯಿಸ್, ಶಿಪ್ರಸಾದ್ ಶೆಟ್ಟಿ, ರವೀಂದ್ರ ಎಸ್., ಪ್ಲೇವಿಯಾ, ಭಾಸ್ಕರ್ ಪೂಜಾರಿ, ಗಿರೀಶ್ ಪಿತ್ರೋಡಿ ಮತ್ತು ಇತರರು ಉಪಸ್ಥಿತರಿದ್ದರು. ಕಟಪಾಡಿ ಗ್ರಾಮೀಣ ಕಾಂಗ್ರಸ್ ಅಧ್ಯಕ್ಷರಾದ ಮಹೇಶ್ ಪೂಜಾರಿ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದರು.