ಗಾಂಧಿ ವಾದದಿಂದ ಸಿದ್ದರಾಮಯ್ಯನವರು, ಕೊನೆಗಾಲದಲ್ಲಿ ಮಾವೋವಾದಕ್ಕೆ ವಾಲಿದ್ದಾರೆ- ಸುನಿಲ್ ಕುಮಾರ್

Oplus_131072

ಉಡುಪಿ: ರಾಜಕೀಯದಲ್ಲಿ ಗಾಂಧಿ ವಾದವನ್ನು ಮುಂದಿಟ್ಟ ಸಿಎಂ ಸಿದ್ದರಾಮಯ್ಯನವರು, ರಾಜಕೀಯದ ಕೊನೆಗಾಲದಲ್ಲಿ ಮಾವೋವಾದಕ್ಕೆ ವಾಲಿದ್ದಾರೆ. ಅವರ ವಿಚಾರ, ಧೋರಣೆಯಿಂದ ಇದು ಸ್ಪಷ್ಟವಾಗುತ್ತದೆ. ರಾಜ್ಯ ಸರ್ಕಾರ ನಗರ ನಕ್ಸಲರ ಕೈ ಗೊಂಬೆಯಂತೆ ಕೆಲಸ ಮಾಡುತ್ತಿದೆ ಎಂದು ಮಾಜಿ ಸಚಿವ ವಿ.ಸುನಿಲ್ ಕುಮಾರ್ ಆರೋಪಿಸಿದರು.

ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಕ್ಸಲರ ಶರಣಾಗತಿ ಪ್ರತಿದಿನ ಅನುಮಾನ ಹುಟ್ಟಿಸುತ್ತಿದೆ. 15 ದಿನಗಳೊಳಗೆ ಶರಣಾಗತಿ ವೇದಿಕೆಯ ಮೇಲೆ ನಡೆದ ನಾಟಕದಂತಿದೆ ಕಾಣುತ್ತಿದೆ. ಶರಣಾಗತಿ ವೇಳೆ ಶಸ್ತ್ರಾಸ್ತ್ರ ಯಾಕೆ ಇರಲಿಲ್ಲ. ಯಾವ ನಗರ ನಕ್ಸಲರ ಮನೆಯಲ್ಲಿ ಶಾಸ್ತ್ರಾಸ್ತ್ರ ಬಚ್ಚಿಟ್ಟಿದ್ದಾರೆ?. ವಿಕ್ರಂ ಗೌಡನ ಆಡಿಯೋ ಮಾಧ್ಯಮಗಳಲ್ಲಿ ಬಂದಿದೆ. ವಿಕ್ರಂ ಗೌಡ ನಾನು ಶರಣಾಗೊದಿಲ್ಲ ಎಂದು ಹೇಳಿದ್ದಾನೆ.ಶರಣಾಗುವುದಿಲ್ಲ ಎಂದಾಗ ಆತನನ್ನು ಹತ್ಯೆ ಮಾಡಿ ಉಳಿದವರನ್ನು ಶರಣಾಗತಿ ಮಾಡಲಾಯಿತಾ?ಎಂಬ ಅನುಮಾನಗಳು ಕಾಡುತ್ತಿವೆ. ಈ ಬಗ್ಗೆ ಸಿಎಂ ಮತ್ತು ಗೃಹ ಇಲಾಖೆ ಸಾರ್ವಜನಿಕವಾಗಿ ಸ್ಪಷ್ಟಪಡಿಸಬೇಕು ಎಂದರು.

ರಾಜ್ಯ ನಕ್ಸಲ್ ಮುಕ್ತ ಆಗುತ್ತಿರುವುದು ಸ್ವಾಗತ ಅರ್ಹ. ಆದರೆ ಶರಣಾಗತಿ ವಿಧಾನವನ್ನು ಪೋಲಿಸ್ ಮಹಾ ನಿರ್ದೇಶಕರು ಒಪ್ಪಿಕೊಳ್ಳುತ್ತಾರಾ?. ಅರಣ್ಯ ಪುನರ್ವಸತಿ ಗೋಸ್ಕರ ಅರ್ಜಿ ಹಾಕಿ ನೂರಾರು ಜನ ಉಡುಪಿ, ಚಿಕ್ಕಮಗಳೂರು ಶಿವಮೊಗ್ಗದಲ್ಲಿ ಕಾಯುತ್ತಿದ್ದಾರೆ. ಆದರೆ ಪುನರ್ವಸತಿ ಪ್ಯಾಕೇಜಿಗೆ ಹಣ ಬಿಡುಗಡೆ ಮಾಡಿಲ್ಲ. ಪುನರ್ವಸತಿಗೆ ಪ್ಯಾಕೇಜ್ ಕೊಡದವರು ನಕ್ಸಲರಿಗೆ ಪ್ಯಾಕೇಜ್ ಕೊಡಲು ಆತುರ ತೋರುತ್ತಿದ್ದಾರೆ. ಇದು ಕಾಡಿನ ನಕ್ಸಲರನ್ನು ನಾಡಿನ ನಕ್ಸಲರನ್ನಾಗಿಸುವ ಪ್ಯಾಕೇಜ್. ನಗರ ನಕ್ಸಲರು ಈ ದೇಶಕ್ಕೆ ಅತಿ ದೊಡ್ಡ ಅಪಾಯ ಎಂದು ಹೇಳಿದರು.

ಎಎನ್ಎಸ್ ಕಾರ್ಯಾಚರಣೆ ಮುಂದುವರಿಯಬೇಕು ಎಂದು ನಾನು ಹೇಳುವುದಿಲ್ಲ. ಆದರೆ ಈ ಪ್ರಕ್ರಿಯೆ ಸರಿಯಾಗಿಲ್ಲ ಅನ್ನೋದು ನನ್ನ ವಾದ. ನಗರ ನಕ್ಸಲರು ಸಂಪೂರ್ಣವಾಗಿ ಮುಖ್ಯಮಂತ್ರಿಗಳ ಕಚೇರಿಯನ್ನು ಆವರಿಸಿಕೊಂಡಿದ್ದಾರೆ.ಇದು ರಾಜ್ಯದ ಹಿತದೃಷ್ಟಿಯಿಂದ ಒಳಿತಲ್ಲ. ಕೃಷ್ಣ ಮುಖ್ಯಮಂತ್ರಿಗಳ ಕಚೇರಿಯಾಗಿಯೇ ಇರಬೇಕು. ಇದು ನಗರ ನಕ್ಸದರ ಕಚೇರಿ ಆಗಿ ಪರಿವರ್ತನೆ ಆಗಬಾರದು. ಮುಖ್ಯಮಂತ್ರಿಗಳ ವಿವೇಚನೆ, ಆಲೋಚನೆ, ಚಟುವಟಿಕೆ, ಚಿಂತನೆ, ನಿರ್ಧಾರ ಅವರದ್ದೇ ಆಗಿರಬೇಕು. ಬದಲಿಗೆ ನಗರ ನಕ್ಸಲರ ಚಿಂತನೆ ಆಗಬಾರದು. ಮುಖ್ಯಮಂತ್ರಿಗಳು ನಗರ ನಕ್ಸಲರ ಬಗ್ಗೆ ಹೊಂದಿರುವ ಮೃದು ಧೋರಣೆ ಕೈಬಿಡಬೇಕು ಎಂದರು.

Leave a Reply

Your email address will not be published. Required fields are marked *

error: Content is protected !!