ಬರೋಬ್ಬರಿ 8 ತಿಂಗಳ ಹಿಂದೆ ಪ್ರೇಯಸಿಯನ್ನು ಕೊಂದು ಫ್ರೀಡ್ಜ್‌ನಲ್ಲಿಟ್ಟ ಭೂಪ ಈಗ ಪೊಲೀಸರ ಅತಿಥಿ!
ಇತ್ತೀಚೆಗೆ ಪ್ರೀತಿ ಮಾಡಿ ಮೋಸ ಮಾಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಪ್ರೀತಿ ಮಾಡಿದಾಕೆಯನ್ನು ಸಾರ್ವಜನಿಕವಾಗಿ ಕೊಲೆ ಮಾಡುವುದು, ಕೊಲೆ ಮಾಡಿ ಪ್ರಿಡ್ಜ್ ನಲ್ಲಿಡುವ ಅನೇಕ ಸುದ್ದಿಗಳನ್ನು ನಾವು ಸಾಕಷ್ಟು ಓದುತ್ತಲೇ ಇರುತ್ತೇವೆ. ಇದೀಗ ಇಂತಹುದ್ದೇ ಒಂದು ಘಟನೆ ಮಧ್ಯಪ್ರದೇಶದ ದೇವಾಸ್ ನಗರದಲ್ಲಿ ನಡೆದಿದ್ದು, ಈ ಘಟನೆ ಆತಂಕವನ್ನುಂಟು ಮಾಡಿದೆ.
ಹೌದು, ದೆಹಲಿಯಲ್ಲಿ ನಡೆದ ಶೃದ್ಧಾ ವಾಕರ್ ಪ್ರಕರಣ ಇನ್ನೂ ಮಾಸಿಲ್ಲ, ಅದಾಗಲೇ ಇಂತಹದ್ದೊಂದು ಪ್ರಕರಣ ನಡೆದಿರುವುದು ದುರಂತವೇ ಸರಿ. ಸಂಜಯ್ ಪಾಟೀದಾರ್ ಎಂಬಾತ ತನಗೆ ಈಗಾಗಲೇ ಮದುವೆಯಾಗಿದ್ದರೂ ಕೂಡ ವಿಷಯವನ್ನು ಮುಚ್ಚಿಟ್ಟು, ಪಿಂಕಿ ಪ್ರಜಾಪತಿ ಎಂಬಾಕೆಯೊಂದಿಗೆ ಲಿವ್ ಇನ್ ರಿಲೇಶನ್‌ಶಿಪ್ ನಲ್ಲಿದ್ದ. ಪಿಂಕಿ ತನ್ನ ಪ್ರಿಯಕರ ಸಂಜಯ್ ಪಾಟೀದಾರ್‌ಗೆ ಮದುವೆಯ ವಿಷಯ ಪ್ರಸ್ತಾಪ ಮಾಡಿದಾಗಲೆಲ್ಲಾ ಕಾರಣವನ್ನೊಡ್ಡಿ ಮದುವೆಯನ್ನು ಮುಂದೂಡುತ್ತಲೇ ಬಂದಿದ್ದ ಭೂಪ ಸತತ 5 ವರ್ಷಗಳಿಂದ ಆಕೆಯ ಜೊತೆಗೆ ಕಾಲಕಳೆಯುತ್ತಿದ್ದ.
ಇತ್ತ ಪಿಂಕಿ ತನ್ನನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ ಹಿನ್ನೆಲೆ ಸಂಜಯ್ ಇಕ್ಕಟ್ಟಿಗೆ ಸಿಲುಕಿದ್ದ. ಈ ಹಿನ್ನೆಲೆ ಮದುವೆಯಾಗುವುದಾಗಿ ಹೇಳಿ ದೇವಾಸ್ ಎಂಬ ನಗರದಲ್ಲಿ ಬಾಡಿಗೆ ಮನೆ ಪಡೆದು ಯುವತಿಯನ್ನು ಆ ಮನೆಗೆ ಕರೆದುಕೊಂಡಿದ್ದ. ಆದರೆ ಆತ ಅಲ್ಲೂ ಕೂಡ ಮದುವೆ ಮುಂದೂಡುತ್ತಿದ್ದರಿಂದ ಆಕೆ ಜಗಳ ತೆಗೆದಿದ್ದಾಳೆ. ಮದುವೆ ಆಗದಿದ್ದಾರೆ ತಾನು ಪೊಲೀಸರಿಗೆ ದೂರು ನೀಡುವುದಾಗಿಯೂ, ಕುಟುಂಬಸ್ಥರಿಗೆ ಹೇಳುವುದಾಗಿಯೂ ಬೆದರಿಸಿದ್ದಾಳೆ.
ಪರಿಸ್ಥಿತಿ ಕೈಮೀರುತ್ತಿರುವುದನ್ನು ಅರಿತ ಸಂಜಯ್ ತನ್ನ ಈಮೇಜ್ ಹಾಳಾಗುತ್ತದೆ ಎಂದು ಹೆದರಿ ಆಕೆಯನ್ನು ಕೊಂದು ಪ್ರಿಡ್ಜ್ ನಲ್ಲಿ ತುರುಕಿದ್ದ.
ಬಳಿಕ ಪ್ರಿಡ್ಜ್ ಸೇರಿದಂತೆ ತನ್ನ ಎಲ್ಲಾ ವಸ್ತುಗಳನ್ನು ಒಂದು ಕೊಠಡಿಯಲ್ಲಿಟ್ಟು ಬೀಗ ಹಾಕಿ, ಮನೆ ಮಾಲೀಕರಿಗೆ ತಾನು ಕೆಲಸದ ನಿಮಿತ್ತ ಬೇರೆ ರಾಜ್ಯಕ್ಕೆ ಹೋಗುತ್ತಿದ್ದು, ಆದಷ್ಟು ಬೇಗ ಬರುತ್ತೇನೆ ಎಂದು ಹೋಗಿದ್ದ. ಈ ಹಿನ್ನೆಲೆ ಮನೆ ಮಾಲೀಕರುಆ ಬೆಡ್ ರೂಂ ಹೊರತುಪಡಿಸಿ ಆ ಮನೆಯನ್ನು ಬೇರೆಯವರಿಗೆ ಬಾಡಿಗೆಗೆ ಕೊಟ್ಟಿದ್ದರು. ಈ ವೇಳೆ ಕೆಲವು ತಿಂಗಳುಗಳಿಂದ ಗಾಳಿ ಬೀಸುವಾಗ ಆ ರೂಮಿನಿಂದ ಕೆಟ್ಟ ವಾಸನೆ ಬರುತ್ತಿರುವುದನ್ನು ಗಮನಿಸಿದ ಮನೆಯವರು ಮಾಲೀಕರಿಗೆ ದೂರು ನೀಡಿದ್ದಾರೆ.
ಮಾಲೀಕರು ಬೀಗ ಒಡೆದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದೀಗ ಆರೋಪಿ ಸಂಜಯ್ ಪಾಟೀದಾರ್ ಪೊಲೀಸರ ಅತಿಥಿಯಾಗಿದ್ದಾನೆ.